ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಶಂಕರ ದೇವರು ಹಿರೇಮಠ ಅವರು ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರು ಆಗಿದ್ದಾರೆ. ಸ್ವತಃ ಮಕ್ಕಳ ಸಾಹಿತ್ಯದತ್ತ ಆಸಕ್ತಿ ಹೊಂದಿದ್ದು, ಶಾಲಾ ಮಕ್ಕಳಿಂದ ಕವಿತೆಗಳನ್ನು ಬರೆಯಿಸಿ, ಅವುಗಳ ಗುಣ ಗ್ರಹಿಸಿ ಸಂಗ್ರಹಿಸಿದ ಕೃತಿಯೇ-ಶ್ರೀ ಗುರು ನಮನ. ವೃತ್ತಿಯಲ್ಲಿ ಶಿಕ್ಷಕರು ಹಾಗೂ ಪ್ರವೃತ್ತಿಯಲ್ಲಿ ಮಕ್ಕಳ ಸಾಹಿತ್ಯ ರಚನೆಕಾರರು.
ಶಂಕರದೇವರು ಹಿರೇಮಠ ಅವರು ಜನಿಸಿದ್ದು 1985ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇವರ ತಂದೆ ಕಂಬಸಯ್ಯ ಸ್ವಾಮಿ ಹಿರೇಮಠ ಮತ್ತು ತಾಯಿ ಶ್ರೀಮತಿ ಗಿರಿಜಾದೇವಿ ಹಿರೇಮಠ, ಶಂಕರದೇವರು ಹಿರೇಮಠ ಅವರು 14 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಭಾಮಿನಿಷಟ್ನದಿಯಲ್ಲಿ ಪುರಾಣಗಳು ಸೇರಿದಂತೆ 16 ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಸೇವೆಯಲ್ಲಿ ತೊಡಗಿದ್ದಾರೆ. ತಾಯಿಯವರು ಶ್ರೀ ಶಾರದಾ ಪ್ರಕಾಶನದ ಅಡಿಯಲ್ಲಿ ಸಾಹಿತ್ಯಕೃತಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಶ್ರೀಮತಿ ಅಶ್ವಿನಿ ವಿಹಿರೇಮಠ ಅವರು ಬಣ್ಣದ ಬುಗುರಿ ಎಂಬ ಶಿಶುಗೀತೆಗಳ ಸಂಕಲನ ಪ್ರಕಟಿಸಿ ಮಕ್ಕಳ ...
READ MORE