ಲೇಖಕ ಪ್ರಮೋದ ಸಾಗರ ಅವರ ಮೊದಲ ಕವನ ಸಂಕಲನ ʻಸಂಸಾರ ಗೀತೆ ಮತ್ತು ಇತರ ಕವಿತೆಗಳುʼ ವಿವಾಹ ನಂತರದ ಪ್ರೀತಿ, ವಾತ್ಸಲ್ಯ, ಸಂಬಂಧಗಳು ಇಲ್ಲಿಯ ಕವಿತೆಗಳ ವಸ್ತು. .
ಲೇಖಕ ಡಾ. ಪ್ರಕಾಶ ಡಂಗಿ ಅವರು ಮುನ್ನುಡಿ ಬರೆದು ‘ನೋಡಲು ಓದಲು ಬಹಳ ಸರಳವೆನಿಸುವ ಇಲ್ಲಿಯ ಕವಿತೆಗಳಲ್ಲಿ ತಂದೆ- ತಾಯಿ ಅಜ್ಜ-ಅಜ್ಜಿ ಹೆಂಡತಿ ಮಕ್ಕಳು, ಗೆಳೆಯರಿದ್ದಾರೆ. ನಾನು ಇದ್ದೇನೆ. ನೀವು ಇದ್ದೀರಿ. ಸಂಸಾರದೊಳಗಿನ ಪ್ರೀತಿಯಿದೆ, ಭೀತಿಯಿದೆ. ಸಿರಿತನ-ಬಡತನವಿದೆ. ಹಾಸ್ಯವಿದೆ, ಲಾಸ್ಯವಿದೆ, ಶೃಂಗಾರವಿದೆ. ಶೌರ್ಯವಿದೆ. ಸರಸ-ವಿರಸವು ಇದೆ ಒಟ್ಟಾರೆಯಾಗಿ ನವರಸವೂ ಇದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖಕ ಪ್ರಮೋದ ಸಾಗರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಎಂಎ ಪದವೀಧರರು, ಸಂಗೀತ ನಿರ್ದೇಶಕರು. ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ, ನಾಟಕ ಇತ್ಯಾದಿ ಇವರ ಹವ್ಯಾಸಗಳು. ʻಸಂಸಾರ ಗೀತೆ ಮತ್ತು ಇತರ ಕವಿತೆಗಳು ಎಂಬುದು ಇವರ ಕವನ ಸಂಕಲನ. ಪ್ರಶಸ್ತಿ ಪುರಸ್ಕಾರಗಳು : ಸಂಗೀತ ವಲಯದಲ್ಲಿಯ ಸಾಧನೆಗಾಗಿ ʻಏಶಿಯಾ ಬುಕ್ ಆಫ್ ರೆಕಾರ್ಡ್ʼ ದಾಖಲೆಯಲ್ಲಿ 6 ಬಾರಿ ಹೆಸರು ಸೇರ್ಪಡೆ. ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಸೇವಾ ರತ್ನ ಪ್ರಶಸ್ತಿʼ ನಾದಪ್ರವೀಣ, ಕನ್ನಡ ಕಣ್ಮಣಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ...
READ MORE