ಲೇಖಕ ಪ್ರಮೋದ ಸಾಗರ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಎಂಎ ಪದವೀಧರರು, ಸಂಗೀತ ನಿರ್ದೇಶಕರು. ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ, ನಾಟಕ ಇತ್ಯಾದಿ ಇವರ ಹವ್ಯಾಸಗಳು. ʻಸಂಸಾರ ಗೀತೆ ಮತ್ತು ಇತರ ಕವಿತೆಗಳು ಎಂಬುದು ಇವರ ಕವನ ಸಂಕಲನ.
ಪ್ರಶಸ್ತಿ ಪುರಸ್ಕಾರಗಳು : ಸಂಗೀತ ವಲಯದಲ್ಲಿಯ ಸಾಧನೆಗಾಗಿ ʻಏಶಿಯಾ ಬುಕ್ ಆಫ್ ರೆಕಾರ್ಡ್ʼ ದಾಖಲೆಯಲ್ಲಿ 6 ಬಾರಿ ಹೆಸರು ಸೇರ್ಪಡೆ. ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಸೇವಾ ರತ್ನ ಪ್ರಶಸ್ತಿʼ ನಾದಪ್ರವೀಣ, ಕನ್ನಡ ಕಣ್ಮಣಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.