ಸಮಕಾಲೀನ ಕನ್ನಡ ಕವಿತೆ-4

Author : ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

Pages 104

₹ 25.00




Year of Publication: 1993
Published by: ಪ್ರಸಾರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056

Synopsys

ಸಮಕಾಲೀನ ಕನ್ನಡ ಕವಿತೆಯ ನಾಲ್ಕನೆಯ ಭಾಗವಾದ ಈ ಸಂಕಲನದಲ್ಲಿ ಬಿ.ಎಂ.ಶ್ರೀ ಮತ್ತು ಪಂಜೆಯವರಿಂದ ಮೊದಲುಗೊಂಡು ಡಾ.ಸಿದ್ಧಲಿಂಗಯ್ಯನವರೆಗೆ ಅನೇಕ ಕವಿಗಳ ಕವಿತೆಗಳಿವೆ. ಹೊಸಗನ್ನಡ ಕವಿತೆಯ ಮುಖ್ಯ ಮಜಲುಗಳನ್ನು ಗುರುತಿಸಬಹುದಾದ ಬಗೆಯಲ್ಲಿ ಪ್ರಾತಿನಿಧಕರಾದ ಕವಿಗಳೂ, ಕವಿತೆಗಳೂ ಈ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಈ ಶತಮಾನದ ಕನ್ನಡ ಕವಿತೆ ಪಡೆದುಕೊಂಡ ಲಯ, ಸ್ವರೂಪ, ಭಾಷೆಯ ಸೊಗಸು, ಸಂವಹನ ಸೂಕ್ಷ್ಮತೆ, ವಸ್ತು ಮತ್ತು ಅಭಿವ್ಯಕ್ತಿಯ ವೈವಿಧ್ಯ, ಒಟ್ಟಾರೆ ಸಮಕಾಲೀನ ಕನ್ನಡ ಕಾವ್ಯದ ವೈಭವ ಓದುಗರ ಅನುಭವಕ್ಕೆ ಬರುತ್ತದೆ. 

About the Author

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
(29 October 1936 - 06 March 2021)

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...

READ MORE

Related Books