ಸಂಸ್ಕೃತದ ಉತ್ಕೃಷ್ಟ ಕಾವ್ಯ ಪರಂಪರೆಯ ನಿರಂತರ ಸಂಪರ್ಕದಿಂದ ಭಾರತೀಯ ಸಮಕಾಲೀನ ಕವಿಗಳು ತಮ್ಮ ವ್ಯಕ್ತಿ ಪ್ರತಿಭೆಯಲ್ಲಿ ಹೊಸ ಪ್ರಯೋಗಗಳನ್ನು ತರಲು ಸಾಧ್ಯ ಎಂಬುದನ್ನು ನಾವು ವೆಂಕಟೇಶಮೂರ್ತಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಪಡೆದ ಕೃತಿ ‘ಋತುವಿಲಾಸ’ದಿಂದ ಕಾಣಬಹುದು. ಈ ಕೃತಿಯು ಕಾಳಿದಾಸನ ಋತುಸಂಹಾರ ಕೃತಿಯ ಮೂಲ ಗ್ರಂಥವಾಗಿದೆ. ಸಂಸ್ಕೃತದ ಸೊಗಡಿಲ್ಲದೆ ಕಾಳಿದಾಸನ ಸಮಾಸಗಳನ್ನು ಕನ್ನಡದ ಜಂಟಿ ಪದಗಳಲ್ಲಿ ಹಿಡಿದಿಡುವುದು ಒಂದು ಯಶಸ್ವೀ ತಂತ್ರವಾಗಿ ಇಲ್ಲಿ ಮೂಡಿಬಂದಿದೆ. ಭಾಷೆಯ ಅರ್ಥ-ನಾದ-ಲಯಗಳ ಅಪೂರ್ವ ಸಾಮರಸ್ಯದ ಕೃತಿಯಾಗಿ ಹೊರಹೊಮ್ಮಿದೆ. ಋತುವರ್ಣನೆ ಮೊದಲಿನಿಂದಲೂ ನಮ್ಮ ದೇಶದ ಕಾವ್ಯದ ಅವಿಭಾಜ್ಯವಾದ ಅಂಗವಾಗಿದ್ದು, ಪ್ರಾಚೀನ ಸಾಹಿತ್ಯದಲ್ಲಿ ಪ್ರತಿಯೊಬ್ಬ ಕವಿಯೂ ಋತುವರ್ಣನೆಗೆ ಕಾವ್ಯದ ಸ್ವಲ್ಪ ಭಾಗವನ್ನು ಮೀಸಲಾಗಿಟ್ಟಿದ್ದಾನೆ. ಕಾಳಿದಾಸನ ‘ಋತುಸಂಹಾರ’ ದ ಮೂಲ ರಾಮಾಯಣದಲ್ಲಿ ಇರಬಹುದಾಗಿದ್ದರೂ, ‘ಋತುಸಂಹಾರವೇ ನಮ್ಮ ಉಳಿದೆಲ್ಲ ಋತುಕಾವ್ಯಕ್ಕೆ ಮೂಲಕಾವ್ಯ, ಕಾರಣ ಪ್ರತಿಮೆಯಾಗಿದೆ. ‘ಋತುಸಂಹಾರ’ದ ಹಿಂದೆ ಇರುವ ಮನೋಭಾವ, ಅನುಭವವನ್ನು ಪ್ರಕಟಿಸುವ ರೀತಿ ಮತ್ತು ಋಣಗಳ ವರ್ಣನೆಗೆ ಕಾವ್ಯ ಸಂದರ್ಭವನ್ನು ಪ್ರಕಟಿಸುವ ರೀತಿ ಮತ್ತು ಋತುಗಳ ವರ್ಣನೆಗೆ ಕಾವ್ಯ ಸಂದರ್ಭವನ್ನು ಕಲ್ಪಿಸಿಕೊಳ್ಳುವ ರೀತಿ ಇವು ಕೆಲಮಟ್ಟಿಗೆ ವಿಶಿಷ್ಟವಾಗಿವೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಪಡೆದ ಕೃತಿ (1991)