ಪುಸ್ತಕ ಮತ್ತು ನವಿಲುಗರಿ

Author : ಗಿರಿಜಾ ಶಾಸ್ತ್ರಿ

Pages 172

₹ 150.00




Year of Publication: 2012
Published by: ಅಭಿನವ ಪ್ರಕಾಶನ
Address: # 17/18-2, 1 ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಗಿರಿಜಾಶಾಸ್ತ್ರಿ ಅವರ ಕವನಗಳ ಸಂಕಲನ-’ಪುಸ್ತಕ ಮತ್ತು ನವಿಲುಗರಿ’. ಕೃತಿಯ ಬೆನ್ನುಡಿ ಬರೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರು ’ಇಲ್ಲಿಯ ಪದ್ಯಗಳು ಆಪ್ತ ವಾಕ್ಯಗಳಂತೆ ನಮ್ಮನ್ನು ತಟ್ಟುತ್ತವೆ. ಸಾಮಾಜಿಕ, ವೈಯಕ್ತಿಕ ಇತ್ಯಾದಿ ವಿಂಗಡಣೆ ಮಾಡಲು ಬಾರದಂತೆ, ನಮಗೆ ನಾವು ಸತ್ಯವಾಗಿ, ಮೌನವಾಗಿ ಹೇಳಿಕೊಳ್ಳುವ ಮಾತುಗಳಂತೆ ಕವಿತೆಗಳಿವೆ ಎಂದು ಪ್ರಶಂಸಿಸಿದ್ದಾರೆ.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books