ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು 1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.
ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ಸುಶೀಲಶೆಟ್ಟಿ ಸ್ಮಾರಕ ಪ್ರಶಸ್ತಿ ಹಾಗೂ ಸಂಕ್ರಮಣ ಪ್ರಶಸ್ತಿಗಳು ಲಭಿಸಿವೆ.