ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕವನ ಸಂಕಲನ ‘ಪಾತ್ರಗಳು ಇರಲಿ ಗೆಳೆಯ’. ಕಾರಣ ಕನ್ಯೆ, ಕಾಜಾಣವನ್ನು ನೋಡಿ !, ಕತ್ತಲೆಯಲ್ಲಿ ಹತ್ತು ನಿಮಿಷ, ಬಯಲಂಗಿ, ಪದ್ಧತಿ,ಆಕಾಶವನ್ನು ಅಳೆಯೋಣವೆಂದರೆ,. ಬೇಟೆ ಪ್ರಸಂಗ , ಪಾತ್ರಗಳು ಇರಲಿ ಗೆಳೆಯ ,ನಿಧಿಧ್ಯಾಸ ,ಒಂದು ಪ್ರಹಸನ , ಮೂಲಧನ, ನಿಸ್ಸಿಮ ರಂಗಧಾಮ, ಹಕ್ಕಿಗಳ ಸಂಸಾರ, ಅಪರಂಪಾರ, ಶೋಣನ ವೀಣೆ, ಸೋಗಲ ಶಿವನ ಲೀಲಾ ವಿನೋದ ಮುಂತಾದವು ಸೇರಿದಂತೆ ಒಟ್ಟು 26 ಕವನಗಳು ಸಂಕಲನಗೊಂಡಿವೆ. ಇಲ್ಲಿಯ ಕವನಗಳು ವಸ್ತುವೈವಿಧ್ಯತೆಯಿಂದ ಕಂಗೊಳಿಸುತ್ತವೆ. ನಿರೂಪಣಾ ಶೈಲಿಯೂ ಮನತಟ್ಟುತ್ತದೆ.
ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...
READ MORE