About the Author

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. 

ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ಹಿಪ್ಪೇಮರ, ರಮ್ಮಿಯಾಟ, ಸೇರಿದಂತೆ ಹಲವು ಕಾವ್ಯಸಂಕಲನಗಳನ್ನು ಪ್ರಕಟಿಸಿದ್ದಾರೆ. 

ನಾಟಕಕಾರರಾಗಿಯೂ ಗುರುತಿಸಿಕೊಂಡಿರುವ ಅಣತಿ ಅವರು ‘ಚಾರ್ವಾಕ’ 1979 (ಎರಡನೇ ಆವೃತ್ತಿ: 2008), ಭೂಮಿ ಹುಣ್ಣಿಮೆ ಹಾಡ (ನಾಟಕ ಅಕಾಡೆಮಿ,  ತೀರ್ಪುಗಾರರ  ಮೆಚ್ಚುಗೆ ಪಡೆದಿದೆ), ಜೇತವನ ( ಹಿಂದಿಗೆ ಭಾಷಾಂತರವಾಗಿದೆ), ಸೂರ್ಯಸಖಿಯ ಒಕ್ಕಲು, ಹಡೆ ಏರಿಸಿದ ಸೂರ್ಯನ ಕುದುರೆ( ಯು.ಆರ್.ಅನಂತಮೂರ್ತಿಯವರ ಕಥೆಯ ರಂಗರೂಪ),  ಕರ್ಪಾಲ್ ಕರ್ಪಾಲ್  (ಪ್ರಹಸನ), ಪರಿಸಾರಕ, ಹೂವಿನ ಸುಗ್ಗಿ( ಮಕ್ಕಳ ನಾಟಕ), ಕೊಳಲ ನ್ಯಾಯ( ಮಕ್ಕಳ ನಾಟಕ), ಶಾಂಪೂ ರಾಜಕುಮಾರಿ( ಮಕ್ಕಳ ನಾಟಕ) ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ಕೆಲವು ಕವಿತೆಗಳು ಇಂಗ್ಲೀಷ್‌, ಹಿಂದಿಗೆ ಅನುವಾದಗೊಂಡಿದ್ದು,             ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನ  ಮತ್ತು ಆಕಾಶವಾಣಿ ಕಾರ್ಯಕ್ರಮಗಳರಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರ ಹಾಗೂ ಸೆಮಿನಾರ್ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅಣತಿ ಅವರು  ಶಿವಮೊಗ್ಗದಲ್ಲಿ ನಡೆದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಪರಂಪರೆ ಸಾಹಿತ್ಯ ಸಂಸ್ಕೃತಿ ಸಂಪುಟದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಚನ್ನರಾಯಪಟ್ಟಣ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.ಇದಲ್ಲದೇ ಶಿವಮೊಗ್ಗ ಕರ್ನಾಟಕ ಸಂಘ ಕೊಡಮಾಡುವ ದ.ರಾ. ಬೇಂದ್ರೆ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ 2017, ವೀ ಸಿ ಪ್ರತಿಷ್ಠಾನದ ಪುರಸ್ಕಾರ, ಕುವೆಂಪು ಶತಮಾನೋತ್ಸವ ಪ್ರಶಸ್ತಿ 2004(ಕ.ಸಾ.ಪ ದೊಡ್ಡಬಳ್ಳಾಪುರ) ಸೇರಿದಂತೆ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

ಸತ್ಯನಾರಾಯಣರಾವ್ ಅಣತಿ

(12 Dec 1935)

Awards