ಊರುಗೋಲು, ಸಾಹಿತಿ ಆರ್. ಜಿ. ಹಳ್ಳಿ ನಾಗರಾಜ್ ಅವರ ಕವನ ಸಂಕಲನ. ಪುರಾಣ ಐತಿಹ್ಯ ಚರಿತ್ರೆ ಮೌಖಿಕ ಪರಂಪರೆಗಳ ಹಿನ್ನೆಲೆಯಲ್ಲಿ ಸಂರಚನೆಗೊಂಡ ಕವನ ಊರುಗೋಲು', ಇದು ಸಂಕಲನದ ಶೀರ್ಷಿಕೆಯಾಗಿಯೂ ಒಪ್ಪುತ್ತದೆ. ಚಿಕ್ಕಂದಿನ ಬದುಕು ಸಾಗಿದ ಬಗೆ, ಪ್ರಸಕ್ತ ಜಗತ್ತಿನ ವಾಸ್ತವ ಇತಿಗಳ ಹುನ್ನಾರಗಳು ಆರ್.ಜಿ. ಹಳ್ಳಿ ಅವರ ಕವಿತೆಗಳಲ್ಲಿ ಹೆಪ್ಪುಗಟ್ಟಿವೆ. ಅಂದರೆ ಸ್ವಕೀಯ ಅನುಭವಗಳ ಪ್ರಪಂಚ ಇಲ್ಲಿ ಪ್ರಧಾನವಾದುದು. ಊರುಗೋಲಿನಲ್ಲಿನ ಮೊನಚಾದ ಭಾಷೆ ನಿರೂಪಣೆಗಳು ಕಾವ್ಯ ಧ್ವನಿಯಾಗಿ ನಿಲುವಂಥದು, ಅಲ್ಲದೆ ಗಂಭೀರ ಕಾಳಜಿಯೂ ಉಂಟು. ಕವಿಯ ಹುಡುಕಾಟದ ತೀವ್ರತೆಗಳಿಂದಾಗಿ ಕಾವ್ಯಸತ್ಯದ ಭರವಸೆ ಮೂಡಿದೆ.
ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...
READ MORE