ಸಿದ್ದಾರೂಢ ಕಟ್ಟಿಮನಿ ಅವರ ಕವನ ಸಂಕಲನ “ಒಂದು ಮುಷ್ಠಿ ನೀರು" . ಇಲ್ಲಿಯ ಕವಿತೆಗಳು ಹೊಸ ಲೋಕಕ್ಕೆ ಸೋಪಾನ ಕಟ್ಟುತ್ತವೆ. ಕಾವ್ಯವೆಂದರೆ ಹೇಳಿ ಮುಗಿಸುವುದಲ್ಲ. ಹೇಳಿದ ಮೇಲೆಯೂ ಉಳಿಯುವುದು ಎನ್ನುವ ಮಾತಿನಂತೆ ಇವರ ಕವಿತೆಗಳು ಓದಿದವರ ಎದೆಯೊಳಗೆ ಇಳಿದು ಪ್ರತಿಷ್ಠಾಪಿಸಿಕೊಂಡು ಬಿಡುತ್ತವೆ. ಕವಿತೆ ಬರೆಯುವ ಯಾವ ಹಮ್ಮು-ಬಿಮ್ಮು ಬಿಗುಮಾನವಿಲ್ಲದೆ ಕವಿತೆಗಳಲ್ಲಿ ತಮ್ಮನ್ನು ಸೇರಿದಂತೆ ಎಲ್ಲವನ್ನು ಗಾಢವಾಗಿ ಸೆರೆ ಹಿಡಿಯುತ್ತಾರೆ. ಇಲ್ಲಿಯ ಕವಿತೆಗಳಲ್ಲಿ ಅಂಥಾದ್ದೊಂದು ಸೆಳೆತವಿದೆ.
ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ...
READ MORE