ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು.
ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ಕಾಲೇಜು ದಿನಗಳಲ್ಲೇ ಕವಿತೆ ಬರೆಯುತ್ತಿದ್ದ ಅವರ ಮೊದಲ ಕೃತಿ ‘ಓಯಸಿಸ್’ ಆನಂತರ ಗುಲಬಾಕ್ಷಿ ಹೂ, ಗುಹೆ, ಮದ್ಯಕೂಟ, ಸೇರಿದಂತೆ ಹಲವು ಕೃತಿಗಳನ್ನ ಪ್ರಕಟಿಸಿದ್ದಾರೆ.
ಶ್ರೀಯುತರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಸಮೀರವಾಡಿ ಕಾವ್ಯ ಪ್ರಶಸ್ತಿ. ಹರಿಹರಶ್ರೀ ಪ್ರಶಸ್ತಿ, ಮಾಣಿಕ್ಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.