‘ಒದ್ದೆಕಣ್ಣುಗಳ ಪ್ರೀತಿ’ -ಸುಧಾಶರ್ಮ ಚವತ್ತಿ ಅವರ ಪ್ರಥಮ ಕವನ ಸಂಕಲನ. ಎಂಭತ್ತರ ದಶಕದಿಂದೀಚೆಗೆ ಕನ್ನಡ ಕಾವ್ಯ ಕ್ಷೇತ್ರಕ್ಕೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದ್ದು ಮಾತ್ರವಲ್ಲ; ಗಮನಾರ್ಹ ಸಾಧನೆಯನ್ನೂ ಮಾಡುತ್ತಿದ್ದಾರೆ. ವಚನ ಚಳವಳಿಯ ನಂತರ ಕನ್ನಡ ಕಾವ್ಯದಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಈ ಹಂತದಲ್ಲಿ ಸುಧಾಶರ್ಮ ಚವತ್ತಿ ಅವರ ಈ ಸಂಕಲನ ಹೊಸ ಸೇರ್ಪಡೆ.
ನಿರ್ವಾಜ್ಯ ಪ್ರೀತಿ, ಅಂತಃಕರಣಕ್ಕಾಗಿ ಹಂಬಲ ಮತ್ತು ಹುಡುಕಾಟ -ಇಲ್ಲಿಯ ಬಹುಪಾಲು ಕವಿತೆಗಳ ಮುಖ್ಯ ಕಾಳಜಿ. ವೈಯಕ್ತಿಕ ಸ್ತರದಲ್ಲಿ ನಿಲ್ಲದೇ ಕ್ರಮೇಣ ಸಾಮಾಜಿಕ ಆಯಾಮ ಪಡೆಯುವ ಇಲ್ಲಿಯ ಕವಿತೆಗಳ ಒಟ್ಟು ಸ್ವರೂಪ ಗಮನಾರ್ಹ. ಕವಿ ಬಿ.ಆರ್. ಲಕ್ಷ್ಮಣರಾವ್ ಗಮನಿಸಿರುವಂತೆ, ’ಇಂದಿನ ಕೋಮಲ ಕಳಲೆ ಬಲಿತು ಗಟ್ಟಿ ಬಿದಿರಾಗಿ, ಕೊಳಲಾಗಿ, ಅದರಿಂದ ಅರ್ಥಪೂರ್ಣ ರಾಗಭಾವಗಳು ಹೊಮ್ಮಲು ಸಾಧ್ಯವಾದೀತು” ಎನ್ನುವ ಮೂಲಕ ಕವಿಯತ್ರಿಯ ಕಾವ್ಯಕೃಷಿಯ ಒಲವನ್ನು ಪ್ರಶಂಸಿಸಿದ್ದಾರೆ.
ದೃಶ್ಯ, ಮುದ್ರಣ, ಈಗ ಭರವಸೆ ಯೂಟ್ಯೂಬ್ ವಾಹಿನಿಗಳ ಮೂಲಕ ಆಪ್ತವಾಗುವವರು ಸುಧಾ ಶರ್ಮಾ, ಚವತ್ತಿ. ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ "ಪ್ರಾಫಿಟ್ ಪ್ಲಸ್" ಪತ್ರಿಕೆಯ ಸಂಪಾದಕಿ. ಇವರು ಉತ್ತಮ ಕವಯತ್ರಿಯೂ ಹೌದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಇವರೂ ಒಬ್ಬರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ಕೆಲಸ. "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ. ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ. ಮುಂದೆ ಕಾವೇರಿ, ಈ ...
READ MORE