About the Author

ದೃಶ್ಯ, ಮುದ್ರಣ, ಈಗ ಭರವಸೆ ಯೂಟ್ಯೂಬ್ ವಾಹಿನಿಗಳ ಮೂಲಕ ಆಪ್ತವಾಗುವವರು ಸುಧಾ ಶರ್ಮಾ, ಚವತ್ತಿ. ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ "ಪ್ರಾಫಿಟ್ ಪ್ಲಸ್" ಪತ್ರಿಕೆಯ ಸಂಪಾದಕಿ. ಇವರು ಉತ್ತಮ ಕವಯತ್ರಿಯೂ ಹೌದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಇವರೂ ಒಬ್ಬರು.

ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ಕೆಲಸ. "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ. ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ. ಮುಂದೆ ಕಾವೇರಿ, ಈ ಟಿ.ವಿ., ಝೀ ಕನ್ನಡ, ಚಂದನ, ಸುವರ್ಣ ಹೀಗೆ ಕನ್ನಡದ ಬಹುತೇಕ ಎಲ್ಲ ವಾಹಿನಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿಗಾಗಿ ಸರಣಿ ಕಾರ್ಯಕ್ರಮ ರೂಪಿಸಿದ್ದಾರೆ. ದೃಶ್ಯಮಾಧ್ಯಮದಲ್ಲಿ ಸುದ್ಧಿ ನಿರ್ವಹಣೆ, ಕಾರ್ಯಕ್ರಮ ನಿರ್ದೇಶನ, ನಿರೂಪಣೆ, ಸಾಹಿತ್ಯ ರಚನೆ ಹೀಗೆ ಎಲ್ಲ ವಿಧದಲ್ಲೂ ಅನುಭವ. ಮಹತಿ ಮೀಡಿಯಾ ಎನ್ನುವ ಪ್ರೊಡಕ್ಷನ್ ಕಂಪನಿಯನ್ನು ಉಷಾ ನಾರಾಯಣ ಜೊತೆ ಸೇರಿ ಆರಂಭಿಸಿ ಹಲವಾರು ವಾಹಿನಿಗಳಿಗೆ ಕಾರ್ಯಕ್ರಮ ನಿರ್ಮಾಣ, ಸಾಕ್ಷ್ಯ ಚಿತ್ರ ನಿರ್ಮಾಣ, ಹೀಗೆ ಸೃಜನಶೀಲವಾಗಿ ತೊಡಗಿಕೊಂಡ ಇವರು ಕಳೆದ ಎರಡು ವರ್ಷಗಳ ಹಿಂದೆ ಪ್ರಾಫಿಟ್ ಪ್ಲಸ್ ಎನ್ನುವ ವಿನೂತನವಾದ,ಸಂತೋಷವೇ ಸಂಪತ್ತು ಎನ್ನುವುದನ್ನು ಪ್ರತಿಪಾದಿಸುವ, ಪಾಸಿಟೀವ್ ಸೈಕಾಲಜಿಯ ಮಾಸ ಪತ್ರಿಕೆಯನ್ನು ಆರಂಭಿಸಿದರು. ಈ ಬುಕ್, ಅಪ್ ಅಲ್ಲೂ ಈ ಮಾಸಪತ್ರಿಕೆ ಲಭ್ಯ ಇದೆ. ಕನ್ನಡದ ಮೊದಲ ಆಡಿಯೋ ಮ್ಯಾಗಝೀನ್ ಆಗಿಯೂ ಪ್ರಾಫಿಟ್ ಪ್ಲಸ್ ವಿಶೇಷತೆ ಗಳಿಸಿದೆ.

"ಒದ್ದೆ ಕಣ್ಣುಗಳ ಪ್ರೀತಿ" ಇವರ ಕವನ ಸಂಕಲನ. ಈ ಸಂಕಲನಕ್ಕೆ ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರಶಸ್ತಿ, ಹವ್ಯಕಶ್ರೀ ಪ್ರಶಸ್ತಿ ಲಭಿಸಿದೆ. "ಅತ್ತುಬಿಡೇ ಗೆಳತಿ" ಇದು ಇವರ ಸಂಯುಕ್ತ ಸಂಕಲನ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟವಾಗಿವೆ.  ಇವರು ಸಂಪಾದಿಸಿದ ಅತ್ತೆ ಸೊಸೆ ಸಂಬಂಧದ " ಎರಡು ಕಣ್ಣು ಒಂದೇ ದೃಷ್ಟಿ-ಅತ್ತೆ ಸೊಸೆ " ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಸುಧಾಶರ್ಮಾ ಚವತ್ತಿ

BY THE AUTHOR