ನೂರೊಂದು ಝೇಂಕಾರ

Author : ಪ್ರಕಾಶ್ ಎಸ್. ಮನ್ನಂಗಿ

Pages 80

₹ 90.00




Year of Publication: 2022
Published by: ಸುಶೀಲ ಪ್ರಕಾಶನ
Address: ಮೋಟೆಬೆನ್ನೂರು, ಹಾವೇರಿ ಜಿಲ್ಲೆ

Synopsys

‘ನೂರೊಂದು ಝೇಂಕಾರ’ ಕೃತಿಯು ಪ್ರಕಾಶ ಎಸ್. ಮನ್ನಂಗಿ ಅವರ ಹನಿಗವನಗಳ ಸಂಕಲನವಾಗಿದೆ. ಇಲ್ಲಿ ನೂರ ಒಂದು ಹನಿಗವನಗಳನ್ನು ಕಾಣಬಹುದು. ಮನ್ನಂಗಿಯವರ ಹನಿಗವನಗಳಲ್ಲಿ ವಿರಹವಿದೆ, ವಾಸ್ತವದ ಕಟುಸತ್ಯಗಳಿವೆ, ಹದಿಹರೆಯದವರಿಗಾಗಿ ಪ್ರಣಯ ಪ್ರಸಂಗಗಳಿವೆ, ನಗಿಸುತ್ತಲೇ ವ್ಯವಸ್ಥೆಯ ನಗ್ನತೆಯನ್ನು ಹೊರಹಾಕುವ ಸಾಮರ್ಥ್ಯ ಇಲ್ಲಿನ ಹನಿಗವಿತೆಗಳಲ್ಲಿದೆ. ಜೀವನದಲ್ಲಿ ಬರುವ ಅನೇಕ ಹಾಸ್ಯ ಸನ್ನಿವೇಶಗಳನ್ನೇ ಚುಟುಕಾಗಿ ಹೊಂದಿಸಿ ಓದುಗರ ತುಟಿಯಂಚಲ್ಲಿ ನಗೆಯುಕ್ಕಿಸುವ ಶಕ್ತಿ ಇಲ್ಲಿನ ಅನೇಕ ಹನಿಗಳಿಗಿದ್ದು ಅವುಗಳು ಹೆಚ್ಚಾಗಿ ದಂಪತಿಗಳ ನಡುವಿನ ಸನ್ನಿವೇಶಗಳಿಂದಲೇ ಹೆಕ್ಕಿದವಾಗಿವೆ.

About the Author

ಪ್ರಕಾಶ್ ಎಸ್. ಮನ್ನಂಗಿ

ಪ್ರಕಾಶ್ ಎಸ್. ಮನ್ನಂಗಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾಗಿದ್ದು, ಪ್ರವೃತ್ತಿಯಲ್ಲಿ ಕವಿ. ಹನಿಗವನ ಸಾಹಿತ್ಯ ಅವರ ಪ್ರಕಾರವಾಗಿದ್ದು, ‘ನೂರೊಂದು ಝೇಂಕಾರ’ ಕೃತಿಯನ್ನು ಹೊರತಂದಿದ್ದಾರೆ. ...

READ MORE

Related Books