ಡಾ. ಸಂಜೀವ ಕುಲಕರ್ಣಿ ಅವರ ‘ನೂರೊಂದು ರೂಮಿ ಹನಿಜೇನು’ ಕೃತಿಯು ಕವನ ಸಂಕಲನವಾಗಿದೆ. ಕೃತಿಯಲ್ಲಿನ ಪಾತ್ರಗಳ ಸಂಭಾಷಣೆಗಳು ಹೀಗಿವೆ ; ಕೊನೆಗೊಂದು ಮಾತು ರೂಮಿ, ನಿನ್ನ ಗೆಳೆತನ ಆದಾಗಿನಿಂದ ಲೋಕದ ಕಣ್ಣಿಗೆ ನಾನೊಬ್ಬ ಹುಚ್ಚ. ಹುಚ್ಚರಾಗದೇ ಬದುಕಿದರೆ ಅದು ಬದುಕಿದಂತೆ ಅಲ್ಲ ಎಂದು ನೀ ಹೇಳಿದ್ದು ನನಗೀಗ ನೂರಕ್ಕೆ ನೂರು ಮನದಟ್ಟಾಗಿದೆ. ಆ ಹುಚ್ಚಿನಲ್ಲಿ ನಾವು ಅಭದ್ರತೆಯ ಮೇರೆಗಳನ್ನು ದಾಟಿ ಅಜ್ಞಾತ ಅಂಚಿಗೆ ಬಂದು ಅಮೂರ್ತದ ಪ್ರಪಾತದೊಳಗೆ ಧುಮುಕುವುದಿದೆಯಲ್ಲ ಅದು ನೋಡು ನಿಜವಾದ ಮಜಾ, ಅದು ನಿಜವಾದ ಬದುಕು. ಕೋಣೆಯ ಕೂಸಾಗಿ ನೂರು ಕಾಲ ಬಾಳಿದರೆ ಏನು ಬಂತು, ಶೂನ್ಯ ಬಯಲಿನ ಬಾನಿನಲ್ಲಿ ದಾರವಿಲ್ಲದ ಪಟವಾಗಿ ಯಾವ ಹಂಗೂ ಇಲ್ಲದೆ ಹಾರಿ ಹೋಗುವುದಿದೆಯಲ್ಲ ಅದು ಖರೆ ಮಜಾ. ನಿನ್ನೆಯನ್ನು ನಿನ್ನೆಗೆ ಬಿಟ್ಟು ಇಂದನ್ನು ಇಂದಿಗೆ ಕೊಟ್ಟು, ಪ್ರೀತಿಯ ಗಾಳಿಯನ್ನು ಉಸಿರಾಡುತ್ತ ಪೂರ್ಣಿಮೆಯ ಚಂದ್ರ ಬಾನೇರಿದಾಗ, ಅರಿವಿನ ಹಾಲ್ ಬೆಳದಿಂಗಳಿನಲ್ಲಿ ರೆಕ್ಕೆ ಬಡಿಯದೇ ತೇಲುತ್ತ ಸುಖಿಸುವುದಿದೆಯಲ್ಲ ಅದು ಮಜಾ, ಅದು ನಿಜದ ನಿಜ’ ಈ ರೀತಿಯ ಬರಹವು ತುಂಬಾ ಆಪ್ತವೆನಿಸುತ್ತದೆ.
ಇಲ್ಲಿನ ಕೆಲವೊಂದು ಕವಿತೆಗಳು ಹೀಗಿವೆ: ‘ಮೊದಲ ಪ್ರೇಮಕತೆಯನ್ನು ಕೇಳಿದ ತಕ್ಷಣವೇ ನಾನು ನಿನ್ನನ್ನು ಹುಡುಕತೊಡಗಿದೆ. ನನ್ನ ಪ್ರೇಮ ಎಷ್ಟು ಕುರುಡಾಗಿತ್ತು ಎಂಬುದು ನನಗೆ ತಿಳಿದಿರಲಿಲ್ಲ ಆಗ ಪ್ರೇಮಿಗಳು ಅಂತಿಮವಾಗಿ ಎಲ್ಲಿಯೋ ಒಂದು ಕಡೆ ಸೇರುತ್ತಾರೆ ಎಂಬುದು ಸುಳ್ಳು ಅವರು ಸದಾಕಾಲ ಒಬ್ಬರೊಳಗೊಬ್ಬರು ಇದ್ದೇ ಇರುತ್ತಾರೆ.’ ಕವಿತೆಗಳ ಇಂತಹ ಸಾಲುಗಳು ಓದುಗರ ಗಮನ ಸೆಳೆಯುತ್ತವೆ.
ಡಾ. ಸಂಜೀವ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದವರು. ಲೇಖಕರು ಹಾಗೂ ಅನುವಾದಕರು. ಕಳೆದ 32 ವರ್ಷಗಳಿಂದ ಧಾರವಾಡದಲ್ಲಿ ಹೆರಿಗೆ ಮತ್ತು ಸ್ತೀರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ,ಪರಿಸರ, ಆಧ್ಯಾತ್ಮ, ಧ್ಯಾನ, ಶಿಕ್ಷಣ ಇವರ ಆಸಕ್ತಿ ಕ್ಷೇತ್ರಗಳು. ’ ಬಾಲ ಬಳಗ’ ಮುಕ್ತ ಮಾದರಿಯ ಶಾಲೆಯ ಕಾರ್ಯಾಧ್ಯಕ್ಷರಾಗಿದ್ದು, ಧಾರವಾಡದಿಂದ 10 ಕಿ.ಮೀ ದೂರದಲ್ಲಿ ‘ಸುಮನ ಸಂಗಮ’ ಕಾಡು ತೋಟದಲ್ಲಿ ಪರಿಸರ ಸ್ನೇಹಿ ಕೃಷಿಯ ಪ್ರಯತ್ನ ಮಾಡಿರುತ್ತಾರೆ. ‘ಸ್ವಯಂ ದೀಪ ಝೆನ್ ಕೇಂದ್ರ’ ಅಧ್ಯಕ್ಷರಾಗಿದ್ದಾರೆ. ಕೃತಿಗಳು ; ಮೊದಲ ಹೆಜ್ಜೆಗಳು, ಸಾವಿರದ ಬೇವಿನ ನೆರಳು, ಪರಿಸರ ಸ್ವದೇಶಿ ...
READ MORE