ಡಾ. ಸಂಜೀವ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದವರು. ಲೇಖಕರು ಹಾಗೂ ಅನುವಾದಕರು. ಕಳೆದ 32 ವರ್ಷಗಳಿಂದ ಧಾರವಾಡದಲ್ಲಿ ಹೆರಿಗೆ ಮತ್ತು ಸ್ತೀರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ,ಪರಿಸರ, ಆಧ್ಯಾತ್ಮ, ಧ್ಯಾನ, ಶಿಕ್ಷಣ ಇವರ ಆಸಕ್ತಿ ಕ್ಷೇತ್ರಗಳು. ’ ಬಾಲ ಬಳಗ’ ಮುಕ್ತ ಮಾದರಿಯ ಶಾಲೆಯ ಕಾರ್ಯಾಧ್ಯಕ್ಷರಾಗಿದ್ದು, ಧಾರವಾಡದಿಂದ 10 ಕಿ.ಮೀ ದೂರದಲ್ಲಿ ‘ಸುಮನ ಸಂಗಮ’ ಕಾಡು ತೋಟದಲ್ಲಿ ಪರಿಸರ ಸ್ನೇಹಿ ಕೃಷಿಯ ಪ್ರಯತ್ನ ಮಾಡಿರುತ್ತಾರೆ. ‘ಸ್ವಯಂ ದೀಪ ಝೆನ್ ಕೇಂದ್ರ’ ಅಧ್ಯಕ್ಷರಾಗಿದ್ದಾರೆ.
ಕೃತಿಗಳು ; ಮೊದಲ ಹೆಜ್ಜೆಗಳು, ಸಾವಿರದ ಬೇವಿನ ನೆರಳು, ಪರಿಸರ ಸ್ವದೇಶಿ ವಿಚಾರದ ಪುಸ್ತಕ, ಒಂದು ಬೊಗಸೆ ಧ್ಯಾನ