ನೆನಪೆಂಬ ಹಾಯಿದೋಣಿ

Author : ಶರಣಪ್ಪ ಕೂಡ್ಲಪ್ಪ ಹೂಲಗೇರಿ

Pages 90

₹ 120.00




Year of Publication: 2022
Published by: ಕಸ್ತೂರಿ ಪ್ರಕಾಶನ
Address: ಐಬಿ ಹಿಂದುಗಡೆ, ಮುಕ್ಕನ್ನಾವರ್ ಪ್ಲಾಟ್, ಹುನಗುಂದ್ 587118, ಬಾಗಲಕೋಟೆ ಜಿಲ್ಲೆ

Synopsys

ಲೇಖಕ ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರ ಕವನಗಳ ಸಂಕಲನ ನೆನಪೆಂಬ ಹಾಯಿದೋಣಿ. ಎಸ್ಕೆ ಕೊನೆಸಾಗರ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕವಿತೆ ವ್ಯಕ್ತಿಯ ಭಾವನೆಗಳ ಅಂತರ, ಅಭಿವ್ಯಕ್ತಿ ತನ್ನ ಮನಸ್ಸಿನಲ್ಲಿ ಜೀವತಳೆದ ವಿಚಾರಗಳಿಗೆ ವೈಚಾರಿಕ ಸ್ಪರ್ಷದೊಂದಿಗೆ ಭಾಷೆಯ ತೋರಣದಿಂದ ಚೆಂದಗೊಳಿಸಿದ ಚಿತ್ತಾರ, ಈ ಪ್ರಕ್ರಿಯೆಯಲ್ಲಿ ಕವಿಯು ನಿರಂತರವಾಗಿ ತೊಡಗಿಕೊಂಡಿರುವನು ಕವಿಗೆ ಕವಿತೆ ಧ್ಯಾನದಂತೆ, ಅಲ್ಲಿನ ಧ್ಯಾನಸ್ಥ ಸ್ಥಿತಿ ಬರಹದ ರೂಪತಾಳಿ, ಮೂರ್ತಗೊಳ್ಳುತ್ತದೆ. ಕವಿಯಾದವನು ಸತ್ಯದ ಪರ ನಿಲ್ಲುವ ವಾದಿಯಂತೆ ಭಗವಂತನ ಬೆಳಕಿನ ಈ ಲೋಕದಲ್ಲಿ ಕಾವ್ಯಾಭಿವ್ಯಕ್ತಿಯ ಮೂಲಕ ಮಾನವ ಸಮಾಜದ ಒಳಿತಿನ ವಕಾಲತ್ತು ಗೈಯ್ಯುತ್ತಾನೆ. ತನ್ನ ಸುತ್ತಲಿನ ಜನಬದುಕಿಗೆ ಮುಖಾಮುಖಿಯಾಗಿ ನಿಂತು ಕಾವ್ಯದ ಮೂಲಕ ಎಲ್ಲರ ಎಲ್ಲ ಬಗೆಯ ತಲ್ಲಣಗಳಿಗೆ ಕವಿತೆಯೆಂಬ ತೋರಣಕ್ಕೆ ಶಬ್ದಗಳನ್ನು ತೊಡಿಸುತ್ತಾನೆ. ಸದಾಕಾಲ ಒಳಿತನ್ನು ಬಯಸುವ ಈ ಕವಿ ನಮ್ಮೆಲ್ಲರ ಪ್ರತಿನಿಧಿ. ಮೇಲಿನ ವಿಚಾರಗಳೆಲ್ಲ ಅಧ್ಯಾಪಕ ಗೆಳೆಯರಾದ ಶರಣಪ್ಪ ಹೊಲಗೇರಿ ಅವರ ಈ ವರೆಗಿನ ಕವನ ಸಂಕಲನಗಳನ್ನು ಗಮನಿಸಿ ಹೇಳಬಹುದು. ಪ್ರಸ್ತುತ ನೆನಪೆಂಬ ಹಾಯಿದೋಣಿ ಎಂಬ ಸಂಕಲನದಲ್ಲಿ ಎಲ್ಲ ಅಂಶಗಳು ಕಾವ್ಯದ ಸಾಲುಗಳ ಗರ್ಭದಲ್ಲಿ ಮೂಡಿಬಂದಿವೆ. ತಮ್ಮ ಬಾಲ್ಯದ ನೆನಪಗಳು, ಅಕಾಲಿಕವಾಗಿ ಬಂದ ಮಳೆ, ವಿಶ್ವವನ್ನು ತಲ್ಲಣಗೊಳಿಸಿದ ಕೊರೊನಾ ಹಾವಳಿಗೆ ಅವರ ಮನಸ್ಸು ಮಿಡಿದಿದೆ ಮತ್ತು ಅನುಕಂಪ ಅನಾವರಣಗೊಂಡಿದೆ. ನಾಡುನುಡಿಯ ಬಗ್ಗೆ ಅಭಿಮಾನವನ್ನು ತೋರುತ್ತಲೇ ಈ ಸಮಾಜದಲ್ಲಿನ ಅಹಿತಗಳು, ದುರವಸ್ಥೆಗೆ ಕಾರಣವಾದವರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.ನಮ್ಮ ಕನ್ನಡದ ನೆಲದಾಭಿವೃದ್ಧಿಗೆ ಕಂಟಕವಾಗಿರುವ ಕಾವೇರಿ, ಮೇಕೆದಾಟು ಮಹಾದಾಯಿಯಂತಹ ಜಲತಂಟೆ, ಗಡಿವಿಚಾರಗಳಿಗೂ ಕು ಶರಣಪ್ಪ ಸಕಾರಾತ್ಮಕವಾಗಿ ಸಂದಿಸಿ ಸುಪಾರ ಕಾಣಬಯಸಿದ್ದಾರೆ. ಸಂತಮಹಾಂತರ, ಬದುಕು, ಆದರ್ಶದ ಬೆಳಕಿನಲ್ಲಿ ನಮ್ಮ ಯುವಜನಾಂಗ ನಡೆಯಲಿ, ಆದರಿಂದ ಸ್ವಾಸ್ಥ್ಯ ಜೀವನ ರೂಪಗೊಳ್ಳಲಿ ಎಂಬ ಸದರಿಯವ ಕುರಿಡಿತ ಸಂಕಲನದಲ್ಲಿ ಕಂಡಿದೆ, ಅಲ್ಲದೇ ಅದು ವೇದ್ಯವಾದದ್ದೇ ಎನ್ನಬೇಕು, ಸದಾ ಕ್ರಿಯಾಶೀಲ ಮನೋಭಾವದ, ಇದರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂಬುದಾಗಿ ಹಾರೈಸಿದ್ದಾರೆ.

About the Author

ಶರಣಪ್ಪ ಕೂಡ್ಲಪ್ಪ ಹೂಲಗೇರಿ
(01 September 1967)

ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರು 01-09-1967ರಂದು ಜನಿಸಿದರು. ಎಂ.ಎ.ಎಂ.ಇಡಿ ವಿದ್ಯಾರ್ಹತೆಯನ್ನು ಹೊಂದಿದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕನಾಗಿ ಬಡ್ತಿ ಹೊಂದಿದರು. ಸದ್ಯ ಹುನಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಮಾಡರ್ನ್ ಮಾನವರು (2016), ಹೊರೂನಾ ಕಾಲ (2021), ನೆನಪಂಬ ಹಾಯಿದೋಣಿ (2022) ಕವನ ಸಂಕಲನಗಳು, ಧ್ರುವತಾರೆ (2017) ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಪಾದಿತ ಏಳು ನಾಟಕಗಳು ಸಂಕಲನದಲ್ಲಿ ಪ್ರಕಟವಾಗಿದೆ. ...

READ MORE

Related Books