ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರು 01-09-1967ರಂದು ಜನಿಸಿದರು. ಎಂ.ಎ.ಎಂ.ಇಡಿ ವಿದ್ಯಾರ್ಹತೆಯನ್ನು ಹೊಂದಿದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕನಾಗಿ ಬಡ್ತಿ ಹೊಂದಿದರು. ಸದ್ಯ ಹುನಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಮಾಡರ್ನ್ ಮಾನವರು (2016), ಹೊರೂನಾ ಕಾಲ (2021), ನೆನಪಂಬ ಹಾಯಿದೋಣಿ (2022) ಕವನ ಸಂಕಲನಗಳು, ಧ್ರುವತಾರೆ (2017) ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಪಾದಿತ ಏಳು ನಾಟಕಗಳು ಸಂಕಲನದಲ್ಲಿ ಪ್ರಕಟವಾಗಿದೆ. ಮಸೀದಿ ಮೇಲಿನ ಮೈಕ್ (2022) ಲೇಖನ ಸಂಗ್ರಹ ಕೃತಿ ಪ್ರಕಟ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಗಾಗಿ ದ್ವಿತೀಯ ಪಿಯುಸಿ ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಯಶಸ್ವಿ ಸ್ಟೋರ್ ಮೋರ್" ಹಾಗೂ ಪ್ರಮುಖ ಐತಿಹಾಸಿಕ ವ್ಯಕ್ತಿಗಳು” ಸಂಕ್ಷಿಪ್ತ ಪರಿಚಯ ಕೈಪಿಡಿ