ಸಮಾಜದಲ್ಲಿ ಅನ್ಯಾಯ, ದೌರ್ಜನ್ಯಗಳಿಗೆ ಪ್ರತಿಧ್ವನಿಯಾಗಿ, ಭರವಸೆಯಾಗಿ 'ನೀಲನೆತ್ತರು' ಸಂಕಲನದ ಕವಿತೆಗಳು ನೆಲೆಗೊಂಡಿವೆ.
ಕವಿಗೆ ತನ್ನ ದಲಿತ ಸಮುದಾಯದ ಕುರಿತು ಹೆಮ್ಮೆ ಇದ್ದು, ಇದೇ ಅಭಿಮಾನದೊಂದಿಗೆ ಇಲ್ಲಿಯ ಕವಿತೆಗಳು ರೂಪ ಪಡೆದಿವೆ. ಶೋಷಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳು ಕವಿತೆಗಳಲ್ಲಿ ಧ್ವನಿಸಿವೆ.
ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿ ಬಾಯಿ ಫುಲೆ ಅವರ ಅರ್ಪಣಾ ಮನೋಭಾವವೂ ಕೆಲ ಕವಿತೆಗಳ ಅಂಶಗಳೂ ಆಗಿವೆ. ಶೋಷಣೆ ವಿರುದ್ದದ ಕವಿಯ ಮನೋಭಾವವೂ ’ನೀಲ ನೆತ್ತರು’ ಸಂಕಲನದಲ್ಲಿ ವ್ಯಕ್ತವಾಗಿದೆ.
ಯುವ ಕವಿ, ಮಣಿಕಂಠ ಅವರು ಆಲೂರು ಗ್ರಾಮದವರು. ತಂದೆ:ಸಿದ್ದಯ್ಯ ತಾಯಿ:ಮಹದೇವಮ್ಮ. ಅವರು 1991 ಜುಲೈ 31ರಲ್ಲಿ ಜನಿಸಿದರು. ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ಹಾಡುಗಾರನಾಗಿ ಭಾಗವಹಿಸಿದ್ದು ಜಾನಪದ ನೃತ್ಯ ಮತ್ತು ಕಿರುನಾಟಕಗಳ ರಚಿಸಿ, ಅಭಿನಯಿಸಿದ್ದಾರೆ. ತಮ್ಮ ಪದವಿಪೂರ್ವ ಶಿಕ್ಷಣ ಸಮಯದಲ್ಲಿ ಕಿರು ನಾಟಕಗಳು, ಹನಿಗವನಗಳು ಮತ್ತು ಕವಿತೆಗಳ ರಚಿಸುವ ಆಸಕ್ತಿ ಹೊಂದಿದವರು. ಅವರ ಚೊಚ್ಚಲ ಕವನ ಸಂಕಲನ ’ನೀಲ ನೆತ್ತರು’ 'ಕನ್ನಡ ಪುಸ್ತಕ ಪ್ರಾಧಿಕಾರ' ಕೊಡಮಾಡುವ ಪ್ರೊತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಅವರ ಕಾವ್ಯನಾಮ ಆ.ಸಿ.ಮ. ...
READ MORE