ಯುವ ಕವಿ, ಮಣಿಕಂಠ ಅವರು ಆಲೂರು ಗ್ರಾಮದವರು. ತಂದೆ:ಸಿದ್ದಯ್ಯ ತಾಯಿ:ಮಹದೇವಮ್ಮ. ಅವರು 1991 ಜುಲೈ 31ರಲ್ಲಿ ಜನಿಸಿದರು. ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ಹಾಡುಗಾರನಾಗಿ ಭಾಗವಹಿಸಿದ್ದು ಜಾನಪದ ನೃತ್ಯ ಮತ್ತು ಕಿರುನಾಟಕಗಳ ರಚಿಸಿ, ಅಭಿನಯಿಸಿದ್ದಾರೆ. ತಮ್ಮ ಪದವಿಪೂರ್ವ ಶಿಕ್ಷಣ ಸಮಯದಲ್ಲಿ ಕಿರು ನಾಟಕಗಳು, ಹನಿಗವನಗಳು ಮತ್ತು ಕವಿತೆಗಳ ರಚಿಸುವ ಆಸಕ್ತಿ ಹೊಂದಿದವರು. ಅವರ ಚೊಚ್ಚಲ ಕವನ ಸಂಕಲನ ’ನೀಲ ನೆತ್ತರು’ 'ಕನ್ನಡ ಪುಸ್ತಕ ಪ್ರಾಧಿಕಾರ' ಕೊಡಮಾಡುವ ಪ್ರೊತ್ಸಾಹ ಧನಕ್ಕೆ ಆಯ್ಕೆಯಾಗಿದೆ. ಅವರ ಕಾವ್ಯನಾಮ ಆ.ಸಿ.ಮ.