‘ನವಿಗವನ’ ಕೃತಿಯು ನವೀನ್ ಮಧುಗಿರಿ ಅವರ ಹನಿ-ಹನಿಗವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮ.ಲ.ನ ಮೂರ್ತಿ ಅವರು, `ಮುಕ್ತಕಗಳ ರೂಪದಲ್ಲಿ, ಹಾಯಿಕುಗಳನ್ನು ನೆನಪಿಗೆ ತಂದು ಕೊಡುವ ಇಂಥ ಹನಿಗವಿತೆಗಳು ಹೊಸಗನ್ನಡ ಕಾವ್ಯದ ಇತಿಹಾಸ ಬರೆಯುವಂಥವರಿಗೆ ನೆರವಾಗುತ್ತದೆ. ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ , ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ. ನವೀನ್ ಅವರ ಹನಿಗವನಗಳು ಚುರುಕಾದ ಭಾಷೆ, ಶಬ್ಧ ಚಮತ್ಕಾರದಿಂದ ಥಟ್ಟನೆ ಓದುಗರನ್ನು ಆಕರ್ಷಿಸಬಲ್ಲವು. ಕಚಗುಳಿ ಕೊಡುವಂಥವು, ಮನಸ್ಸಿಗೆ ಮುದ ನೀಡಬಲ್ಲವು. ಓದಿನ ಅಭಿರುಚಿಯನ್ನು ಪೋಷಿಸುವ ದೃಷ್ಟಿಯಿಂದಲೂ ಇಂಥ ಹನಿಗವನಗಳು ಅವಶ್ಯವಾದವು. ಕನ್ನಡ ನಿಯತಕಾಲಿಕೆಗಳಲ್ಲಿ ಇಣುಕು ಹಾಕುವ ಇವನ್ನು ಪತ್ರಿಕೆಯವರು ಪೋಷಿಸಿಕೊಂಡು ಬರುತ್ತಿದ್ದಾರೆ. ಹಿರಿಯರಾದ ವೈಎನ್ಕೆ, ಡುಂಡಿರಾಜ್, ಸಿ.ಪಿ.ಕೆ, ಲಕ್ಷ್ಮಣರಾವ್ ಮುಂತಾದವರು ಈ ನಿಟ್ಟಿನಲ್ಲಿ ಗಮನಾರ್ಹರು. ಈ ಸಂಕಲನದ ಹನಿಗವಿತೆಗಳಲ್ಲಿ ಇಂಥದೇ ವಸ್ತು ಎಂಬ ಮಿತಿಯಿಲ್ಲದಿರುವುದು ಕಂಡು ಬರುತ್ತದೆ. ಪ್ರೀತಿ, ಪ್ರೇಮ, ವಿರಸ, ವಾತ್ಸಲ್ಯ, ಆಪ್ತತೆ, ಕರುಳ ಸಂಬಂಧ, ಸಾಮಾಜಿಕ ರಾಜಕೀಯ ಹೀಗೆ ಹತ್ತಾರು ವಸ್ತುಗಳು ಈ ಕಿರು ಕವಿತೆಯಲ್ಲಿ ಹಾಸುಹೊಕ್ಕಾಗಿ ಬೆರೆತಿವೆ. ಇವು ಆ ಕ್ಷಣದಲ್ಲಿ ಸುಳಿದ, ಹೊಳೆದ ವಸ್ತುಗಳು, ಭಾವಗಳು. ಇಲ್ಲಿನ ಹನಿಗವನಗಳ ಉದ್ದೇಶ ಮಹತ್ತರವಾದುದನ್ನು ಹೇಳುವಂಥದಲ್ಲ. ಆದರೂ ತಮಗೆ ಸುಳಿ ಮಿಂಚಿನಂತೆ ಕಂಡದ್ದನ್ನು ಹೇಳಬಲ್ಲ ಮುಕ್ತ ಅವಕಾಶ ಕವಿಗಿರುತ್ತದೆ. ಆದ್ದರಿಂದಲೇ, ಕಾವ್ಯ ಪರಿಕರವಾದ ಭಾಷೆ, ಲಯ, ಪ್ರತಿಮೆ, ರೂಪಕ, ಸಂಕೇತಗಳ ಚಿತ್ರಣವನ್ನೂ ಆ ಕ್ಷಣದಲ್ಲಿ ತಲ್ಲಣವನ್ನುಂಟು ಮಾಡಬಲ್ಲ ಲಕ್ಷಣಗಳನ್ನು ಈ ಸಂಕಲನದ ಕೆಲವು ಕವಿತೆಗಳಾದರೂ ಹೊಂದಿವೆಯೆಂಬ ಕಾರಣದಿಂದ ಮೆಚ್ಚಬಹುದಾಗಿದೆ' ಎಂದಿದ್ದಾರೆ.
ನವೀನ್ ಮಧುಗಿರಿ ಅವರ ಮೂಲನಾಮ ರಘುನಂದನ್ . ವಿ. ಆರ್. ವೃತ್ತಿಯಿಂದ ಕೃಷಿಕರು. ಸಾಹಿತ್ಯ ರಚನೆಯಲ್ಲಿ ಆಸಕ್ತಿ. ಅವರ ಕತೆ, ಕವಿತೆ, ಶಿಶುಗೀತೆ, ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ರುಚಿಗೆ ತಕ್ಕಷ್ಟು ಪ್ರೀತಿ, ಚಿಟ್ಟೆ ರೆಕ್ಕೆ, ನವಿಗವನ ...
READ MORE