ಜಪಾನಿ ಸಾಹಿತ್ಯ ಪ್ರಕಾರವಾದ ಹೈಕುಗಳು ಚಟುಕು ಅಲ್ಲದ ಒಂದು ಸಣ್ಣ ಕವಿತೆಯ ಬಂಧದಲ್ಲಿರುತ್ತದೆ. 5, 7, 5 ಹೀಗೆ ಒಟ್ಟು 17 ಪದಗಳ ಕವನವಿದು. ಈ ಪದಗಳ ಮಿತಿಯಲ್ಲೇ ವಿರಾಟ ರೂಪದ ದರ್ಶನ ಇಲ್ಲಿ ಸಾಧ್ಯವಾಗುತ್ತದೆ. ಈ ಕವನ ಸಂಕಲನದ ಬಹುತೇಕ ಹೈಕುಗಳು ರೈತಪರ, ಪ್ರೀತಿ, ವಿರಹದ ತಲ್ಲಣಗಳು, ರಾಜಕಾರಣದ ಗೊಸುಂಬೆತನ, ಅಹಂ ಪ್ರದರ್ಶನದ ಅನಾರೋಗ್ಯಕರ ಪೈಪೋಟಿ ಈ ವಿಷಯ ವೈವಿಧ್ಯತೆಯನ್ನು ಒಳಗೊಂಡಿವೆ. ರಾಯಚೂರಿನ ಶೀಲಾಕುಮಾರಿ ದಾಸ್ ಕೃತಿಯ ಮುನ್ನುಡಿಯಲ್ಲಿ ’ಜಪಾನಿ ಹೈಕುಗಳತ್ತ ಒಲವು ತೋರಿರುವ ಕವಿಗಳು ಅದರ ಬಂಧವೂ ಒಳಗೊಂಡು, ವಿಷಯ ವೈವಿಧ್ಯತೆಯನ್ನೂ ಕಾಯ್ದುಕೊಂಡು ಬಂದಿದ್ದಾರೆ’ ಎಂದರೆ, ಬೆನ್ನುಡಿಯಲ್ಲಿ ಕಥೆಗಾರ ಮಹಾಂತೇಶ ನವಲಕಲ್ ’ಅರ್ಥಪೂರ್ಣ ಹೈಕುಗಳನ್ನು ನೀಡುವತ್ತ ಕವಿಗಳು ಹೊಸ ಭರವಸೆ ಮೂಡಿಸಿದ್ದಾರೆ’ ಎಂದು ಪ್ರೋತ್ಸಾಹಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಡದಿನ್ನಿಯವರಾದ ಶಿವಶಂಕರ ಕಡದಿನ್ನಿ ಅವರು ಹುಟ್ಟಿದ್ದು 1997ರ ಜೂನ್ 12 ರಂದು. ಗುಲಬರ್ಗಾ ವಿ.ವಿ. ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಮಳೆಬಿಲ್ಲು-ಇವರ ಮೊದಲ ಕವನ ಸಂಕಲನ. ಜಪಾನಿ ಸಾಹಿತ್ಯ ಹೈಕುಗಳ ಮಾದರಿಯಲ್ಲಿ ಬರೆದ ’ನಸುಕು’ ಕವನ ಸಂಕಲನವೂ ಇತ್ತೀಚೆಗೆ ಪ್ರಕಟವಾಗಿದೆ. ಗಜಲ್ ಮಾದರಿಯ ಕವಿತೆಗಳ ರಚನೆಯತ್ತ ಒಲವಿದೆ. ...
READ MORE