ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಡದಿನ್ನಿಯವರಾದ ಶಿವಶಂಕರ ಕಡದಿನ್ನಿ ಅವರು ಹುಟ್ಟಿದ್ದು 1997ರ ಜೂನ್ 12 ರಂದು. ಗುಲಬರ್ಗಾ ವಿ.ವಿ. ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಮಳೆಬಿಲ್ಲು-ಇವರ ಮೊದಲ ಕವನ ಸಂಕಲನ. ಜಪಾನಿ ಸಾಹಿತ್ಯ ಹೈಕುಗಳ ಮಾದರಿಯಲ್ಲಿ ಬರೆದ ’ನಸುಕು’ ಕವನ ಸಂಕಲನವೂ ಇತ್ತೀಚೆಗೆ ಪ್ರಕಟವಾಗಿದೆ. ಗಜಲ್ ಮಾದರಿಯ ಕವಿತೆಗಳ ರಚನೆಯತ್ತ ಒಲವಿದೆ.