ಕವಿ ಶಂಕರ.ಹುಲಕಲ್ (ಕೆ) ಅವರ ಚೊಚ್ಚಲ ಕವನ ಸಂಕಲನ ’ನನ್ನೆದೆಯ ಭಾವನೆಗಳು’.ಒಟ್ಟು 120 ಕವಿತೆಗಳಿವೆ. ಪ್ರೇಮ, ಸಾಮಾಜಿಕತೆ, ಹಾಸ್ಯ, ವ್ಯಂಗ್ಯ ಹೀಗೆ ವಸ್ತು ವೈವಿಧ್ಯತೆ ಇದೆ. ನಿರೂಪಣಾ ಶೈಲಿಯೂ ಆಕರ್ಷಕವಾಗಿದೆ.
ಕೃತಿಗೆ ಮುನ್ನುಡಿ ಬರೆದ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ, ‘ ಅಧ್ಯಯನದ ಪರಿಣಾಮ ಚೊಚ್ಚಲ ಸಂಕಲನವಾದರೂ ಇಲ್ಲಿಯ ಕವನಗಳು ಅರ್ಥಪೂರ್ಣವಾಗಿ ಮೂಡಿ ಬಂದಿದೆ’ ಎಂದು ಅಭಿಪ್ರಾಯ ಪಟ್ಟರೆ, ಪ್ರಾಂಶುಪಾಲ ಸಾಹಿತಿ ಅಬ್ದುಲ್ ಕರೀಮ್ ಬೆನ್ನುಡಿ ಬರೆದು ‘ಪರಿಣಾಮಕತೆಯ ದೃಷ್ಟಿಯಿಂದ ಇಲ್ಲಿಯ ಕವನಗಳು ಹೆಚ್ಚು ಪ್ರಭಾಶಾಲಿಯಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಶಂಕರ.ಹುಲಕಲ್(ಕೆ) ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದವರು. ತಂದೆ ಮಲ್ಲಿಕಾರ್ಜುನ. ತಾಯಿ ರತ್ಮಮ್ಮ. ಇವರು ಕೃಷಿಕರು. ನನ್ನೆದೆಯ ಭಾವನೆಗಳು -ಇವರ ಚೊಚ್ಚಲ ಕವನ ಸಂಕಲನ. ಸದ್ಯ, ಯಾದಗಿರಿಯಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದು, ಬಿ.ಎ. ಪದವೀಧರರು. ...
READ MORE