ಕವಿ-ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರು ಸಂಪಾದಿತ ಕವನ ಸಂಕಲನ-ನನ್ನ ಕವಿತೆ ಹಿಂದಿನ ಕಥನ. ಅವರೇ ಹೇಳುವಂತೆ ‘ಕನ್ನಡದ ಕಲ್ಯಾಣ ನೆಲದಲ್ಲಿ ಇಂತಹ ಕವಿತೆಯ ಬರವಣಿಗೆಯಲ್ಲಿ ಬದುಕುತ್ತಿರುವ ಆಯ್ದ 25 ಕವಿವರ್ಯರ ಕವಿತೆಗಳನ್ನು , ಅದರಲ್ಲೂ ಅವರಿಗೆ ತುಂಬಾ ಕಾಡಿರುವ ಕವಿತೆಗಳನ್ನು ಇಟ್ಟುಕೊಂಡು, ಆ ಕವಿತೆಯ ಹಿಂದಿರುವ ಜಾಡು ಹಿಡಿದು ಪುಟ್ಟ ಪುಟ್ಟ ಕಥನಗಳೊಂದಿಗೆ ಪುಸ್ತಕವಾಗಿಸುವುದು ಒಂದು ವಿಶಿಷ್ಟವೇ ಸರಿ. ಇಲ್ಲಿಯ ಎಲ್ಲ ಕವಿತೆಗಳು ಸರಳವಾಗಿವೆ. ಹೊಸ ವಸ್ತು ಅಂತೇನಿಲ್ಲ. ಬದುಕಿನ ನಡುವೆ ತಾಕಿರುವ ವಸ್ತುಗಳು ಹಾಗೂ ಮಾನವೀಯ ಸಂಬಂಧಗಳ ತೀವ್ರ ಕಾಳಜಿಗಳು ಕಂಡಿದ್ದರಿಂದ ಕಥನಗಳು ಹುಟ್ಟಿಕೊಂಡಿವೆ’ ಎಂದು ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
25 ಜನ ಕವಿಗಳು ತಮಗೆ ಕಾಡಿರುವ ಕವಿತೆಗಳನ್ನು ವಿಶ್ಲೇಷಿಸಿಲ್ಲ. ಕವಿತೆಯ ಆಶಯವನ್ನು ಹೇಳಿಲ್ಲ. ಆದರೆ, ಕವಿತೆಯ ಹುಟ್ಟಿನ ಹಿಂದಿರುವ ಆಶಯವನ್ನು ತಿಳಿಸಿದ್ದಾರೆ ಎಂದೂ ಕೃತಿಯ ಸ್ವರೂಪವನ್ನು ತೋರಿದ್ದಾರೆ.
ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ. ‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ...
READ MORE