ಓ.ಎಲ್., ನಾಗಭೂಷಣ ಸ್ವಾಮಿ ಅವರು ಬರೆದ ಮೊದಲ ಕವನ ಸಂಕಲನ-ನಕ್ಷತ್ರ. ಇಲ್ಲಿ ಒಟ್ಟು 12 ಕವನಗಳಿದ್ದು, ವಿ.ಎನ್. ಲಕ್ಷ್ಮಿನಾರಾಯಣ ಹಾಗೂ ಟಿ.ಎಸ್. ರಾಮಸ್ವಾಮಿ ಅವರು ಈ ಕವನಗಳನ್ನು ವಿಶ್ಲೇಷಿಸಿದ್ದಾರೆ.
ಬೆನ್ನುಡಿ ಬರೆದ ಹೊರೆಯಾಲ ದೊರೆಸ್ವಾಮಿ ಅವರು ‘ಇಲ್ಲಿಯ ಕವಿತೆಗಳು ಬದುಕನ್ನು ಅತಿ ಹತ್ತಿರದಿಂದ ಅವಲೋಕಿಸುತ್ತವೆ. ದಿನನಿತ್ಯ ಬಳಸುವ ಮಾತು ಅವರ ಕವನಗಳ ವೈಶಿಷ್ಟ್ಯವಾಗಿವೆ. ಇವುಗಳ ಮೂಲಕವೇ ಕವನಗಳು ಹೊಸದನ್ನು ಹುಡುಕುತ್ತವೆ ಎಂದು ಶ್ಲಾಘಿಸಿದ್ದಾರೆ. ಕೃತಿಯ ಕೊನೆಯ ಚೀನಿ ಭಾಷೆಯಿಂದ ಇವರು ಅನುವಾದಿಸಿದ ನಾಲ್ಕು ಕವನಗಳಿವೆ.
ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...
READ MORE