About the Author

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). 

ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ಗೌರವಯುತ ಹುದ್ದೆಗಳ ನಿರ್ವಹಣೆ, ನಕ್ಷತ್ರಗಳು (ಕವನ ಸಂಕಲನ), 'ವಿಮರ್ಶೆಯ ಪರಿಭಾಷೆ, ಪ್ರಜ್ಞಾಪ್ರವಾಹ ತಂತ್ರ, ಹರಿಹರ, ಪುರಾಣ, ಭಾಷಾಂತರ, 

ನನ್ನ ಹಿಮಾಲಯ (ಪ್ರವಾಸ ಕಥನ,) ನಮ್ಮ ಕನ್ನಡ ಕಾವ್ಯ (ಸಂಪಾದನೆ), ಕನ್ನಡ ಶೈಲಿ ಕೈಪಿಡಿ, (ಇತರರೊಡನೆ) ಅಲ್ಲಮ ವಚನ ಸಂಗ್ರಹ, ತತ್ವಪದಗಳು(ಪ್ರಾತಿನಿಧಿಕ ಸಂಕಲನ), ಇಂದಿನ ಹೆಜ್ಜೆ (ವಚನಗಳನ್ನು ಕುರಿತ ವಿಮರ್ಶಾ ಲೇಖನಗಳು), ಏಕಾಂತ ಲೋಕಾಂತ (ಅಂಕಣ ಬರಹ) ಮತ್ತೆ ತೆರೆದ ಬಾಗಿಲು (ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಕುರಿತ ವಿಮರ್ಶಾ ಲೇಖನಗಳು) ಮುಖ್ಯ ಪುಸ್ತಕಗಳು

ಅಕ್ಕ ತಂಗಿಯರು (ಚೆಕಾವ್ ನಾಟಕದ ಅನುವಾದ ೧೯೯೩), ಕನ್ನಡಕ್ಕೆ ಬಂದ ಕವಿತೆ (ಬೇರೆ ಭಾಷೆಗಳಿಂದ ಆಯ್ದ ಕವಿತೆಗಳ ಅನುವಾದ), ಧಾರ್ಮಿಕ ಜೀವನ ಮತ್ತು ಬದುಕಿನ ಕಲೆ, ಹಿಂಸೆಯನ್ನು ಮೀರಿ ಅನುದಿನ ಚಿಂತನ, ಪ್ರೀತಿಯೆಂದರೇನು(ಮೂಲ ಜೆ.ಕೆ), ಚೀನಾದ ನಾಗರಿಕತೆ, ಯುವ ಕವಿಗೆ ಬರೆದ ಪತ್ರಗಳು(ರೇನ‌ ಮಾರಿಯಾ ರಿಲೈ), ಯುದ್ಧ ಮತ್ತು ಶಾಂತಿ (ಟಾಲ್‌ಸ್ಟಾಯ್ ಕಾದಂಬರಿ) ಮುಖ್ಯ ಇಂಗ್ಲಿಷ್‌ನಿಂದ ಅನುವಾದಿಸಿದ ಕೃತಿಗಳು.

ಚಂದ್ರಶೇಖರ ಕಂಬಾರ ಅವರ ಚಕೋರಿ, ತುಕ್ರನ ಕನಸು, ಬೆಳಗೆರೆ ಕೃಷ್ಣಶಾಸ್ತ್ರಿಯವರ ಯೇಗ್ದಾಗೆಲ್ಲಾ ಐತೆ, ಮನು ಬಳಿಗಾರ್ ಅವರ ಕಥೆಗಳು, ಜಿ. ಎಸ್. ಶಿವರುದ್ರಪ್ಪ ಅವರ ಕವಿತೆಗಳು ಸೇರಿದಂತೆ ಹಲವು ಕನ್ನಡ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಸುಮಾರು 300ಕ್ಕೂ ಹೆಚ್ಚಿನ ಲೇಖನಗಳು,150 ಕಮ್ಮಟಗಳು,100 ಕ್ಕೂ ಮೀರಿ ರಾಜ್ಯ, ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡನೆ, ಚಾರಣ, ಚಲನಚಿತ್ರ ರಸಗ್ರಹಣ ಅಧ್ಯಾಪಕ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯ ವಿಶ್ವವಿದ್ಯಾಲಯಗಳ ಅಕಾಡೆಮಿಗಳ ಸದಸ್ಯತ್ವ, ವಿಮರ್ಶೆಯ ಪರಿಭಾಷೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಬಹುಮಾನ, ಚಕೋರಿ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಜಿ.ಎಸ್.ಎಸ್ ಪ್ರಶಸ್ತಿ.

 

ಓ. ಎಲ್. ನಾಗಭೂಷಣಸ್ವಾಮಿ

(22 Sep 1953)

Books by Author

Awards

BY THE AUTHOR