ಬದುಕಿನ ಸಿಹಿ ಅಂಶಗಳು ಕಹಿ ಸತ್ಯಗಳನ್ನು ಹನಿಗವನಗಳ ಮೂಲಕ ವಿವರಿಸುವ ಪ್ರಯತ್ನವನ್ನು ಕವಿ ಬಸವರಾಜ ಕುಂಬಾರರು ನಕ್ಷತ್ರ ಮಾಲೆ ಕೃತಿಯಲ್ಲಿ ಮಾಡಿದ್ದಾರೆ.
ಇವರ ಹನಿಗವನಗಳಲ್ಲಿ ಮುಖ್ಯವಾಗಿ ಕಂಡುಬರುವುದು ಕಷ್ಟ ಮತ್ತು ಸಮಸ್ಯೆಗಳ ಸಮಯದಲ್ಲಿ ಜನ ಯಾವ ನಿಂದನೆಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಮಾತು ಕಂಡು ಬರುತ್ತದೆ. ಪರಿಸರ ಪ್ರೇಮಿಯಾಗಿ, ಉತ್ತಮ ಮನುಷ್ಯನಾಗಿ ಹೇಗೆ ಬದುಕಬೇಕು ಎಂಬುದನ್ನು ಬಸವರಾಜರು ತಮ್ಮ ಹನಿಗವನಗಳಲ್ಲಿ ತಿಳಿಸಿದ್ದಾರೆ.
ಬರಹಗಾರ ಬಸವರಾಜ ಕುಂಬಾರ್ ಅವರು ಜನಿಸಿದ್ದು 1987 ಜೂನ್ 1ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಅರಳಹಳ್ಳಿಯವರಾದ ಬಸವರಾಜರ ತಂದೆ ಶಿವಪ್ಪ ಕುಂಬಾರ್, ತಾಯಿ ಕಲ್ಯಾಣಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಭರವಸೆಯೇ-ಬದುಕು ಮತ್ತು ನಕ್ಷತ್ರ ಮಾಲೆ. ...
READ MORE