ನಾನು ಸತ್ತಮೇಲೆ

Author : ರಘುನಂದನ

Pages 172

₹ 200.00




Year of Publication: 2024
Published by: ಚಾರುಮತಿ ಪ್ರಕಾಶನ
Address: # 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು - 560018
Phone: 94482 35553

Synopsys

“ನಾನು ಸತ್ತಮೇಲೆ” ರಘುನಂದನ ಅವರ ಕವನ, ಆಟದ ಹಾಡು, ಕಬ್ಬವಾಗಿದೆ. ಈ ಹೊತ್ತಿಗೆಯಲ್ಲಿ ಮೂರು ಪಾಲುಗಳನ್ನು ಕಾಣಬಹುದು. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ನಾನು ಸತ್ತಮೇಲೆ ಅನ್ನುವ ಹೆಸರಿನಡಿ, ‘ಇವು ಕವಿತೆಗಳು’ ಎಂದು ಸಾಧಾರಣವಾಗಿ ಜನ ಕರೆಯುತ್ತಾರಲ್ಲ, ಅಂಥವುಗಳಾಗಿವೆ ಎಂದು ನಾನು ಬಗೆಯುತ್ತ ಬಂದಿರುವ ಪದ್ಯಗಳಿವೆ. ಕನ್ನಡಿಸಿದ ಕವಿತೆಗಳು ಅನ್ನುವುದರ ಅಡಿ, ಬೇರೆ ನುಡಿಗಳಿಂದ ಕನ್ನಡಕ್ಕೆ ತಂದ ಪದ್ಯಗಳಿವೆ. ಆಟದ ಹಾಡು, ಕಬ್ಬ ಅನ್ನುವುದರಡಿ, ನಾನು ಸ್ವತಂತ್ರವಾಗಿ ಬರೆದ ನಾಟಕಗಳಲ್ಲಿನ ಹಾಡು, ಕಬ್ಬಗಳಿವೆ; ಬೇರೆ ನುಡಿಗಳಲ್ಲಿರುವ ನಾಟಕಗಳನ್ನು ಕನ್ನಡಿಸುವಾಗ ಬರೆದವಿದೆ; ಹಾಗೂ ನಾಲ್ಕು ರಂಗಪ್ರಯೋಗಗಳಿಗೆ ಬರೆದ ಪ್ರಸ್ತಾವನೆಯ ದೃಶ್ಯಗಳಿವೆ. ಸಮಗ್ರ ಕವಿತೆ, ಇಲ್ಲಿಯವರೆಗಿನ ಕವಿತೆ, ಈ ತನಕದ ಕವಿತೆ ಥರದ ಹೆಸರಿರುವ ಹೆಬ್ಬೊತ್ತಿಗೆಗಳನ್ನು ಬಿಟ್ಟರೆ ಕವನ ಸಂಕಲನಗಳಲ್ಲಿ ಬೇರೆ ಕೆಲವು ಬರಹಗಳಂಥವಾಗಲಿ ಇರುವುದಿಲ್ಲ. ಆದರೆ ಇಲ್ಲಿ ನಾಟಕದ ಹಾಡು, ಕಬ್ಬಗಳು ಕೂಡ ಇವೆ. ಕಾರಣ, ಸರಳ: ನಾಟಕವು ಕಾವ್ಯ; ದೃಶ್ಯಕಾವ್ಯ; ನೋಡಲು, ಆಡಲೆಂದು ಬರೆದ ಕಾವ್ಯ; ಕೇಳು, ಓದು, ನೋಡು,ಆಡು, ಕೇಳೋದು-ನೋಡಾಡು ಕಬ್ಬ.

About the Author

ರಘುನಂದನ

ಕವಿ, ನಾಟಕಕಾರ ರಘುನಂದನ ವೃತ್ತಿನಿರತ ನಿರ್ದೇಶಕ, ರಂಗಕಲೆಯ ಅಧ್ಯಾಪಕರು. ಸಮುದಾಯ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ತೊಡಗಿಕೊಂಡಿದ್ದು, ಕನ್ನಡ ನಾಡಿನ ಉದ್ದಗಲ ಕೆಲಸಮಾಡಿದ್ದಾರೆ. ಬಳಿಕ ಮೈಸೂರಿನ ರಂಗಾಯಣದಲ್ಲಿ, ಅದು ಆರಂಭಗೊಂಡಾಗಿ ನಿಂದ ತೊಡಗಿ, ಹನ್ನೆರಡು ವರ್ಷಗಳ ಕಾಲ ಅಭಿನಯ ಶಿಕ್ಷಕರಾಗಿದ್ದರಲ್ಲದೆ, ಆ ಸಂಸ್ಥೆಯದೇ ನಾಟಕಕಾರರಾಗಿದ್ದರು. ಅಲ್ಲಿನ ರಂಗನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಹಲವು ದಶಕಗಳಿಂದ ನೀನಾಸಮ್ ಸಂಸ್ಥೆಯ ಒಡನಾಡಿ ಆಗಿದ್ದು, ಸಂಸ್ಥೆ ನಡೆಸುವ ರಂಗಶಿಕ್ಷಣ ಕೇಂದ್ರದಲ್ಲಿಯೂ, ತಿರುಗಾಟ ತಂಡದಲ್ಲಿಯೂ ಅಧ್ಯಾಪನ, ರಂಗನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ, ಮತ್ತು ತ್ರಿಶ್ಶೂರ್ ನಾಟಕ ಶಾಲೆ, ಕೇರಳ-ಇವುಗಳಿಂದ ಮೊದಲುಗೊಂಡು ಹಲವು ಸಂಸ್ಥೆಗಳಲ್ಲಿ ಅನೇಕ ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿ, ...

READ MORE

Related Books