ನಾನಾಗದ ನಾನು

Author : ಗೋಪಾಲ್ ಯಡಗೆರೆ

Pages 40

₹ 40.00




Year of Publication: 1990
Published by: ತಮಸೋಮ ಪ್ರಕಾಶನ
Address: ಕಸ್ತೂರ್‌ ಬಾ ರಸ್ತೆ, ಶಿವಮೊಗ್ಗ
Phone: 9448127845

Synopsys

ಗೋಪಾಲ ಯಡಗೆರೆ ಅವರ ಮೊದಲ ಕವನ ಸಂಕಲನ ’ನಾನಾಗದ ನಾನು’. ವ್ಯಕ್ತಿಯೊಳಗಣ ಆತ್ಮಶೋಧನೆಯ ಹುಡುಕಾಟದ ಪ್ರಯತ್ನದ ಫಲವೇ ಈ ಕೃತಿ. ಜೀವನ ಎಂಬುದೇ ಗೊಂದಲಗಳ ಗೂಡು. ಏನು ಮಾಡಬೇಕು? ಯಾವ ಹಾದಿಯಲ್ಲಿ ಸಾಗಬೇಕು? ಯಾರನ್ನು ನಂಬಬೇಕು? ಯಾರ ಜೊತೆ ಸಂಪರ್ಕವಿರಿಸಿಕೊಳ್ಳಬೇಕು? ಎಂಬೆಲ್ಲ ಗೊಂದಲಗಳು ಮಾನವನನ್ನು ಅನೇಕ ಬಾರಿ ಕಾಡುತ್ತದೆ. ಜೊತೆಗೆ, ಸತ್ಯ, ಸುಳ್ಳಿನ ತಾಕಲಾಟ, ನಾಟಕದ ಜಗತ್ತು ಅನೇಕ ಬಾರಿ ದಿಗ್ರ್ಭಾಂತರನ್ನಾಗಿಸಿ ಮುಂದೆ ಹೆಜ್ಜೆ ಇಡದಂತೆ ಮಾಡಿದಾಗ, ಜಗತ್ತಿನಲ್ಲಿ ಇರುವ ಸತ್ಯಗಳಾವುವು ಎಂಬ ಒಳ ನೋಟದ ಚಿಂತನೆ ಇಲ್ಲಿ ಕಾಣಸಿಗುತ್ತದೆ. ಇಂತಹ ಹಲವು ಹುಡುಕಾಟ, ಮನುಷ್ಯನ  ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಪರಿ ಇಲ್ಲಿಯ ಕವನಗಳಲ್ಲಿದೆ.

About the Author

ಗೋಪಾಲ್ ಯಡಗೆರೆ
(14 July 1963)

ಲೇಖಕ, ಪತ್ರಕರ್ತ ಗೋಪಾಲ್ ಎಸ್. ಯಡಗೆರೆ, 1963 ಜುಲೈ 14 ರಂದು ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕು ಯಡಗೆರೆಯಲ್ಲಿ ಜನಿಸಿದರು. ತಂದೆ ಸಿಂಗಪ್ಪಯ್ಯ, ತಾಯಿ ಪದ್ಮಾವತಿ. ಉದಯವಾಣಿ ಪತ್ರಿಕೆಯಲ್ಲಿ 28 ವರ್ಷ ಕಾಲ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ನಂತರ, 2017 ರಿಂದ ಕನ್ನಡಪ್ರಭ ಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ನಾನಾಗದ ನಾನು’, ಕವನ ಸಂಕಲನ, ’ಸೋಲನ್ನು ಸೋಲಿಸು’ ಮತ್ತು ’ಮಿಸ್ಡ್ ಕಾಲ್’ ಸಾಹಿತ್ಯ ಕೃತಿಗಳನ್ನು ಹೊರ ತಂದಿದ್ದಾರೆ. ’ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ, ಸುವರ್ಣ  ಲೇಡೀಸ್ ಕ್ಲಬ್‍ನ ಸುವರ್ಣ ಪ್ರಶಸ್ತಿ, ಗುರುಸಿದ್ದಶ್ರೀ ...

READ MORE

Related Books