ಲೇಖಕ, ಪತ್ರಕರ್ತ ಗೋಪಾಲ್ ಎಸ್. ಯಡಗೆರೆ, 1963 ಜುಲೈ 14 ರಂದು ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲೂಕು ಯಡಗೆರೆಯಲ್ಲಿ ಜನಿಸಿದರು. ತಂದೆ ಸಿಂಗಪ್ಪಯ್ಯ, ತಾಯಿ ಪದ್ಮಾವತಿ.
ಉದಯವಾಣಿ ಪತ್ರಿಕೆಯಲ್ಲಿ 28 ವರ್ಷ ಕಾಲ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ ನಂತರ, 2017 ರಿಂದ ಕನ್ನಡಪ್ರಭ ಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ನಾನಾಗದ ನಾನು’, ಕವನ ಸಂಕಲನ, ’ಸೋಲನ್ನು ಸೋಲಿಸು’ ಮತ್ತು ’ಮಿಸ್ಡ್ ಕಾಲ್’ ಸಾಹಿತ್ಯ ಕೃತಿಗಳನ್ನು ಹೊರ ತಂದಿದ್ದಾರೆ.
’ಮಾನವೀಯ ವರದಿಗಾಗಿ ಭೂಪಾಳಂ ಚಂದ್ರಶೇಖರ ಪ್ರಶಸ್ತಿ, ಸುವರ್ಣ ಲೇಡೀಸ್ ಕ್ಲಬ್‍ನ ಸುವರ್ಣ ಪ್ರಶಸ್ತಿ, ಗುರುಸಿದ್ದಶ್ರೀ ಪ್ರಶಸ್ತಿ, ವಿಪ್ರಧ್ವನಿ ಸಾಹಿತ್ಯ ಕಲಾ ಪ್ರಶಸ್ತಿ, ಸೋಲನ್ನು ಸೋಲಿಸು ಕೃತಿಗೆ ರಾಜ್ಯ ಮಟ್ಟದ “ಅಜೂರ ಸಾಹಿತ್ಯ” ಪ್ರಶಸ್ತಿ’ಗಳು ಸಂದಿವೆ.