’ನಾ ಪಟ್ಟ ಪಾಡು ಅದು ನನ್ನ ಹಾಡು’ ಕವನ ಸಂಕಲನದಲ್ಲಿ ಹೂವು, ಹೆಣ್ಣು. ಮಳೆ, ಮಣ್ಣು - ಎಲ್ಲವೂ ಮನುಷ್ಯ ಸಂಬಂಧಿ ವಸ್ತುವಾಗಿ ರೂಪಗೊಂಡಿದೆ. ಅವರ ಕವಿತೆಗಳಲ್ಲಿ ಹೂವು ಅರಳುವಾಗ, ಹೆಣ್ಣು ಕರೆಯುವಾಗ, ಮಳೆ ಬಿರಿಯುವಾಗ, ಮಣ್ಣು ಮಾತಾಡುವಾಗ - ಮನುಷ್ಯನ ಇತಿಹಾಸ ಒತ್ತಾಸೆಯಾಗಿ ಒಡಮೂಡುತ್ತದೆ. ಅವರ ಅನುಭವ ಮತ್ತು ಅರಿವುಗಳೊಂದಾದ ವಿಶಿಷ್ಟ ನೆಲೆ ಅನಾವರಣಗೊಳ್ಳುತ್ತದೆ. ’ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ ಮನಸು ಕನಸುಗಳಿಲ್ಲಿ ಜಾಜಿ ಮಲ್ಲಿಗೆ ಸತ್ತ ನರಗಳ ಸುತ್ತ ಹಸಿದ ಹಾವುಗಳಿಲ್ಲ ಟೊಂಗೆ ಟೊಂಗೆಯ ತುಂಬ ಬಿರಿವ ಮೊಗ್ಗೆ’ ಹೀಗೆ ಬಡತನದ ಬದುಕಿನ ನಿರ್ಮಲ ಮನಸ್ಥಿತಿಯನ್ನು ಕಂಡುಕೊಳ್ಳುತ್ತಲೇ ಅದನ್ನು ನಿಸರ್ಗದ ಪರಿಭಾಷೆಯಲ್ಲಿ ಪ್ರಕಟಿಸುವ ರೀತಿಯಲ್ಲೇ ಆಪ್ತತೆ ಇದೆ. ಪಾತ್ರೋಟರ ಪ್ರೇಮ ಪದ್ಯಗಳೂ ವಿಶಿಷ್ಟವಾಗಿವೆ. ಆಪ್ತತೆಯಲ್ಲಿ ಅರಿವನ್ನು ಅರಳಿಸುವ ಜವಾಬ್ದಾರಿಯೂ ಕಾಣುತ್ತದೆ. ಅವರ ಏಳು ಕವನ ಸಂಕಲನಗಳಾದ ’ಕರಿ ನೆಲದ ಕಲೆಗಳು’, ’ಜಾಜಿ ಮಲ್ಲಿಗೆ’, ಕಲ್ಲಿಗೂ ಗೊತ್ತಿರುವ ಕತೆ’, ’ಕರಿಯ ಕಟ್ಟಿದ ಕವನು’, ’ನನ್ನ ಕನಸಿನ ಹುಡುಗಿ’, ’ನದಿಗೊಂದು ಕನಸು ಮತ್ತು ಅವಳು’, ’ಅಂಗಳದ ಮುಂದೆ’ ಇವುಗಳ ಸಮಗ್ರ ಕೃತಿ ಇದಾಗಿದೆ.
ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...
READ MORE