‘ಮೂವತ್ತು ಮಳೆಗಾಲ ಸಂಪುಟ- 2’ ಹಿರಿಯ ಕವಿ, ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಸಮಗ್ರ ಕಾವ್ಯ ಸಂಪುಟದ ಭಾಗ. ಹೊಸಗನ್ನಡ ಕಾವ್ಯಸಂದರ್ಭದ ನವ್ಯೋತ್ತರ ಕಾಲಮಾನದಲ್ಲಿ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ ಈ 'ಮೂವತ್ತು ಮಳೆಗಾಲ'ಗಳಲ್ಲಿ ಪಡೆದುಕೊಂಡ ಸಮೃದ್ಧಿಯನ್ನೂ, ವೈವಿಧ್ಯವನ್ನೂ, ಪ್ರಯೋಗಶೀಲತೆಯನ್ನೂ ಮತ್ತು ನಾವೀನ್ಯತೆಯನ್ನೂ, ಅವರ ಸಮಕಾಲೀನರಾದ ಇನ್ನಿತರ ಯಾವ ಕವಿಗಳ ಇಷ್ಟರ ಮಟ್ಟಿಗೆ ಪಡೆದುಕೊಳ್ಳಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತೇನೂ ಅಲ್ಲ. ಅಭಿಜಾತ ಮತ್ತು ಆಧುನಿಕ ಕಾವ್ಯಪರಂಪರೆಯೊಂದಿಗೆ ನಿರಂತರ ಸಂವಾದ ಹಾಗೂ ಅನುಸಂಧಾನಗಳನ್ನು ನಡೆಸುತ್ತಾ ಕಾವ್ಯಪ್ರಯೋಗಪರಿಣತಮತಿಯಾದ ಸೃಜನಶೀಲತೆಗೆ ಮಾತ್ರ ಈ ಬಗೆಯ ಯಶಸ್ಸು ಸಾಧ್ಯ. ಈ ಗೆಲುವಿನ ಹಾದಿಯಲ್ಲಿ ವೆಂಕಟೇಶಮೂರ್ತಿಯವರ ಕಾವ್ಯನಾಮರ್ಥ್ಯ ಕನ್ನಡ ಪ್ರಧಾನ ಧಾರೆಯಾದ 'ಕಥನ'ಕ್ಕೆ ವಿವಿಧ ಕಾವ್ಯಪ್ರಕಾರಗಳ ಮೂಲಮಾನದಲ್ಲಿ ತಂದುಕೊಟ್ಟ ಆಯಾಮಗಳು ಅವರನ್ನು ಈ ಕಾಲದ ಮಹತ್ವದ ಜನಪ್ರೀತಿಯ ಕವಿಗಳಲ್ಲಿ ಒಬ್ಬರನ್ನಾಗಿಮಾಡಿದೆ ಎನ್ನುತ್ತಾರೆ ಸಾಹಿತಿ ಜಿ.ಎಸ್.ಶಿವರುದ್ರಪ್ಪ.
ಈವರೆಗಿನ ಹಲವು ಸಾಹಿತ್ಯ ಚಳುವಳಿಗಳಿಂದ ಕಲಿತಪಾಠಗಳೂ, ಕವಿತೆಯ ನಿರ್ಮಿತಿ ಗಂಭೀರವಾದೊಂದು ಕಲೆಗಾರಿಕೆ ಎಂಬ ಎಚ್ಚರವೂ ಎಲ್ಲಿಯೂ ಸ್ಥಗಿತಗೊಳ್ಳದ ಹೊಸ ಜಿಗಿತಗಳ ಮೂಲಕ ಮುನ್ನಡೆಯುವ ಉತ್ಸಾಹವೂ ಬದುಕಿನ ವಾಸ್ತವಗಳನ್ನೂ, ವಿಸ್ಮಯಗಳನ್ನೂ, ನಿಗೂಢಗಳನ್ನೂ ಗ್ರಹಿಸಿ ನಿರೂಪಿಸುವ ಮತ್ತು ವ್ಯಾಖ್ಯಾನಿಸುವ ಕೌಶಲವೂ, ದೊಡ್ಡದೊಂದನ್ನು ಹಿಡಿದು ಕಡೆದು ನಿಲ್ಲಿಸಬೇಕೆಂಬ ಮಹತ್ವಾಕಾಂಕ್ಷೆಯೂ, ದಡ ಮಿಗಿಲಾಗಿ ಕವಿತೆಯ ಬಗ್ಗೆ ಅವರಿಗಿರುವ ಅದಮ್ಯವಾದ ಪ್ರೀತಿಯೂ ಮಹದೇಶಮೂರ್ತಿ ಅವರ ಬರಹದಹಿಂದಿನಮೂಲಪ್ರೇರಣೆಗಳಾಗಿವೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE