ಕುಶ್ಚಂತ್ ಕೋಳಿಬೈಲು ಅವರ ಹನಿಗವನಗಳ ಸಂಕಲನ ‘ಮುತ್ತಿನಹಾರ’. ಚುಟುಕು ಖಾವ್ಯ ಸಾಹಿತಿ ಡುಂಡಿರಾಜ್ ಅವರು ಈ ಕೃತಿಗೆ ಮುನ್‌ಉಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕುಶ್ವಂತ್ ಅವರು “ಮುತ್ತಿನ ಹಾರ”ದಲ್ಲಿ ಹನಿಗವನಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿ ಕೊಟ್ಟಿದ್ದಾರೆ. ಮೊದಲನೆಯ ಭಾಗದಲ್ಲಿ ಅವರು ತಮ್ಮ ಹೃದಯವನ್ನು ಕಾಡಿದ ಹಲವು ಸಂಗತಿಗಳ ಬಗ್ಗೆ ಅವರ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಅನಿಸಿಕೆಗಳು ಗಾತ್ರದಲ್ಲಿ ಹನಿಗಳಾದ್ದರಿಂದ ಅವುಗಳನ್ನು “ಹನಿಸಿಕೆಗಳು” ಎಂದು ಕರೆದಿದ್ದಾರೆ. (ನಾನೂ ಈ ಪದವನ್ನು ಹಲವು ವರ್ಷಗಳ ಹಿಂದೆಯೇ ಬಳಸಿದ್ದೆ.) ಇವುಗಳನ್ನು ಕುಶ್ವಂತರ ಎರಡು ವರ್ಷಗಳ ಹನಿ ದಿನಚರಿ ಅನ್ನಬಹುದು. ವ್ಯಾಲಂಟೈನ್ ದಿನದಿಂದ ಹಿಡಿದು ರಕ್ಷಾಬಂಧನದವರೆಗೆ, ಟೊಮೇಟೊ , ಪೆಟ್ರೋಲ್ ಬೆಲೆ ಏರಿಕೆಯಿಂದ ಹಿಡಿದು ಐಪಿಎಲ್ ಪಂದ್ಯಗಳವರೆಗೆ, ಜನರಲ್ ತಿಮ್ಮಯ್ಯ, ತೇಜಸ್ವಿ, ಹಾಜಬ್ಬ, ಅಪ್ಪು ಮುಂತಾದ ವ್ಯಕ್ತಿಗಳ ಬಗ್ಗೆ ಕುಶ್ವಂತ್ ಆ ಕ್ಷಣದ ತಮ್ಮ ಅನಿಸಿಕೆಗಳನ್ನು ಕೆಲವೇ ಸಾಲುಗಳಲ್ಲಿ ಹೇಳಿದ್ದಾರೆ. ವಸ್ತು ವೈವಿಧ್ಯ ಈ ಭಾಗದ ಕವಿತೆಗಳ ಶಕ್ತಿ ಅನ್ನಬಹುದು. ಕ್ರಿಕೆಟ್ ಪ್ರಿಯರಿಗೆ ಆರ್ ಸಿ ಬಿ ಬಗ್ಗೆ ಬರೆದ ಪದ್ಯಗಳು ಇಷ್ಟವಾದರೆ, ಸಿನಿಮಾ ಪ್ರಿಯರಿಗೆ ಅಪ್ಪುವಿನ ಬಗ್ಗೆ ಬರೆದದ್ದು ಆಪ್ತವಾಗಬಹುದು. ಇವೆಲ್ಲವೂ ಸಾಂದರ್ಭಿಕ ರಚನೆಗಳು ಎಂಬುದಾಗಿ ಹೇಳಿದ್ದಾರೆ.
ವೃತ್ತಿಯಿಂದ ವೈದ್ಯರಾದ ಮೇ ಡಾ. ಕುಶ್ವಂತ ಕೋಳಿಬೈಲು ಅವರು ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ.ನಂತರ ಸೈನ್ಯ ಸೇರಿ ಆರ್ಮಿಮೆಡಿಕಲ್ ಕೋರ್ ವಿಭಾಗದಲ್ಲಿ ಭರ್ತಿ.ನಿವೃತ್ತಿಯ ನಂತರ ಪುಣೆಯಲ್ಲಿ ಪಿಡಿಯಾಟ್ರಿಶಿಯನ್ ಆಗಿ ಕೆಲಸ. ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ಸಾಹಿತ್ಯ ಮೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುತ್ತಿದ್ದಾರೆ. ಕೃತಿಗಳು: .ಕೂರ್ಗ್ ರೆಜಿಮೆಂಟ್ (ಪ್ರಬಂಧಗಳ ಸಂಕಲನ), ಮುತ್ತಿನ ಹಾರ (ಕವನಗಳ ಸಂಕಲನ), ಕಾವೇರಿ ತೀರದ ಕಥೆಗಳು (ಕಥಾ ಸಂಕಲನ) ...
READ MORE