ವೃತ್ತಿಯಿಂದ ವೈದ್ಯರಾದ ಮೇ ಡಾ. ಕುಶ್ವಂತ ಕೋಳಿಬೈಲು ಅವರು ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ.ನಂತರ ಸೈನ್ಯ ಸೇರಿ ಆರ್ಮಿಮೆಡಿಕಲ್ ಕೋರ್ ವಿಭಾಗದಲ್ಲಿ ಭರ್ತಿ.ನಿವೃತ್ತಿಯ ನಂತರ ಪುಣೆಯಲ್ಲಿ ಪಿಡಿಯಾಟ್ರಿಶಿಯನ್ ಆಗಿ ಕೆಲಸ. ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ಸಾಹಿತ್ಯ ಮೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುತ್ತಿದ್ದಾರೆ.
ಕೃತಿಗಳು: .ಕೂರ್ಗ್ ರೆಜಿಮೆಂಟ್ (ಪ್ರಬಂಧಗಳ ಸಂಕಲನ), ಮುತ್ತಿನ ಹಾರ (ಕವನಗಳ ಸಂಕಲನ), ಕಾವೇರಿ ತೀರದ ಕಥೆಗಳು (ಕಥಾ ಸಂಕಲನ)