ಮುದ್ದಿನ ಹಕ್ಕಿ ಸೋಮಲಿಂಗ ಬೇಡರರವರ ಎರಡನೇ ಕೃತಿ. ಇದರಲ್ಲಿ ಮಕ್ಕಳಿಗೆ ಮುದ ನೀಡುವ 25 ಕವಿತೆಗಳಿವೆ. ಸಾಭಿನಯದೊಂದಿಗೆ ಹಾಡಲು ಬರುವಂಥ ಸುಂದರ ಕವಿತೆಗಳ ಸಂಕಲನ ಇದಾಗಿದೆ. ಪ್ರಾಸಾನುಪ್ರಾಸ ತ್ರಾಸವಿಲ್ಲದೆ ಮೂಡಿ ಬಂದಿದೆ. ಕವಿ ಶಕ್ಷಕ ಸೋಮಲಿಂಗ ಅವರು ಬಾಲಕರಾಗಿ ಮುದ್ದಿನ ಹಕ್ಕಿಯನ್ನು ಹೀಗೆ ಕರೆದಿದ್ದಾರೆ. ಬಾರೆಲೆ ಬಾರೆಲೆ ಮುದ್ದಿನ ಹಕ್ಕಿ ಹಾಕುವೆ ಕಾಳನು ನಾನಿನಗೆ ಬೇಗನೆ ಬಾರೆಲೆ ತಿನ್ನಲು ಮುಕ್ಕಿ ಹೆದರಲು ಬೇಡಾ ನೀನನಗೆ ಇಂಥ ಕವನಗಳು ಈ ಕೃತಿಯಲ್ಲಿದ್ದು ಉತ್ತಮ ಮಕ್ಕಳ ಕವನ ಸಂಕಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006), ಹಕ್ಕಿ ಗೂಡು ( ಮಕ್ಕಳ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ಸಮೀರವಾಡಿ ದತ್ತಿ, ಮಕ್ಕಳ ...
READ MORE