ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು.
ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006), ಹಕ್ಕಿ ಗೂಡು ( ಮಕ್ಕಳ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ಸಮೀರವಾಡಿ ದತ್ತಿ, ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ ದತ್ತಿ ಬಹುಮಾನಗಳು), ಕೆಂಪು ಸ್ವೆಟರ್ (ಮಕ್ಕಳ ಕಥೆಗಳು 2020)
ಪ್ರಶಸ್ತಿಗಳು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಗವಿಮಠ ಪ್ರತಿಷ್ಠಾನದ ಮಧುರಖಂಡಿ ವೃತ್ತಿ- ಪ್ರವೃತ್ತಿ ಪ್ರಶಸ್ತಿ ,ಸಂಯುಕ್ತ ಕರ್ನಾಟಕ ಕಥಾ ಬಹುಮಾನ, ತಾಲೂಕು ಆಡಳಿತ ಬೀಳಗಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು ಜಿಲ್ಲಾ ಮಕ್ಕಳ ಮಾಣಿಕ್ಯ ರಾಜ್ಯ ಪ್ರಶಸ್ತಿ.