ಮಾತಾಡಿ ಹೆಣಗಳೆ

Author : ಬಸವಪ್ರಭು ಪಾಟೀಲ

Pages 34

₹ 8.00




Year of Publication: 1983
Published by: ಕವಿತಾ ಪ್ರಕಾಶನ
Address: ಕಲ್ಯಾಣ ವೈದ್ಯಾಲಯ ಮಾನ್ವಿ,ರಾಯಚೂರು

Synopsys

‘ಮಾತಾಡಿ ಹೆಣಗಳೆ’ ಕವಿ ಬಸವಪ್ರಭು ಪಾಟೀಲರ ಕವನ ಸಂಕಲನ. ದೇಹ ಮನಸ್ಸುಗಳ ರೋಗ ನಿದಾನದ ಜೊತೆಗೆ ಸಮಾಜದ ರೋಗ ನಿದಾನವನ್ನು -'ನಾನು ಕವಿ ಅಲ್ಲ' ಎಂದು ಹೇಳಿಕೊಳ್ಳುತ್ತ ಕಾವ್ಯ ಮುಖದಿಂದ ಮಾಡಿರುವ ಡಾ. ಬಸವಪ್ರಭು ಪಾಟೀಲರ ಮೊದಲ ಕವನ ಸಂಕಲನ 'ಮಾತಾಡಿ ಹೆಣಗಳೇ' ಗಟ್ಟಿ ಅನುಭವದಿಂದ ಸ್ಪಷ್ಟ ವಿಚಾರಗಳಿಂದ ದಿಟ್ಟ ನಿಲುವಿ ನಿಂದ ಸಹೃದಯರನ್ನು ರಂಜಿಸುವು ದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಹಿರಿಯ ಲೇಖಕ ಶಾಂತರಸ. ಒಕ್ಕಲು ತನದ ಮನೆತನದಲ್ಲಿ ಹುಟ್ಟಿ ಉತ್ತಿ ಬಿತ್ತಿದ ಪಾಟೀಲರಿಗೆ ಮಣ್ಣಿನ ವಾಸನೆಯ ಗೊತ್ತು, ಮಣ್ಣಿನಲ್ಲಿಯೇ ಬೆಳೆಯುವ ಮಲ್ಲಿಗೆಯ ವಾಸನೆಯೂ ಗೊತ್ತು; ನೇರತನ, ಜೀವನದ ಬಗ್ಗೆ ಅದಮ್ಯ ಪ್ರೀತಿ, ಅನ್ಯಾಯವನ್ನು ಪ್ರತಿಭಟಿಸುವ ಕೆಚ್ಚು, ಪ್ರಾಮಾಣಿಕತೆ ಮುಂತಾದ ಮಣ್ಣಿನ ಮಕ್ಕಳ ಗುಣಗಳನ್ನು ಅವರ ಕಾವ್ಯದಲ್ಲಿ ನಾವು ಧಾರಾಳವಾಗಿ ಕಾಣುತ್ತೇವೆ.

ಸರಳವಾದ ಸ್ಪಷ್ಟವಾದ ಗೊಂದಲವಿಲ್ಲದ ಅಭಿವ್ಯಕ್ತಿ, ಭಾಷೆಯ ಬಗ್ಗೆ ಅವರಿಗಿರುವ ಎಚ್ಚರದಿಂದ ಅದು ಮೊನಚಾಗಿ, ಮಾರ್ದವವಾಗಿ ದುಡಿದು ಭಾವಗಳ ಪ್ರಕಟನೆಯಲ್ಲಿ ಸಂಯಮನ್ನು ಕಾಯ್ದು ಕೊಂಡಿದೆ. ವೈದ್ಯವೃತ್ತಿಯ ಜೊತೆಗೆ ಹಲವಾರು ಸಾಮಾಜಿಕ ಮತ್ತು ಸಾಹಿತ್ಯಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಬಸವಪ್ರಭು ಕ್ರಿಯಾಶೀಲ ಬರಹಗಾರರು; ಕಾವ್ಯ ಸಾಮಾಜಿಕ ಕ್ರಿಯೆಗೆ ಪ್ರಚೋದನೆಯಾದರಷ್ಟೇಸಾಲದು, ಕವಿ ಆ ಕ್ರಿಯೆಯಲ್ಲಿ ಪ್ರತ್ಯಕ್ಷ ಭಾಗಿಯಾಗಬೇಕು ಎಂಬುದನ್ನು ನಂಬಿದವರು.

About the Author

ಬಸವಪ್ರಭು ಪಾಟೀಲ

ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...

READ MORE

Related Books