ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ.
ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ಸುದ್ದಿಮೂಲ, ರಾಯಚೂರು ವಾಣಿ ಮುಂತಾದ ಪತ್ರಿಕೆಗಳಲ್ಲಿ ಲೇಖನ ಕವಿತೆಗಳು ಪ್ರಕಟವಾಗಿವೆ.