‘ಕೊರಡ ಕೊನರು’ಬಸವರಾಜ್ ತೂಲಹಳ್ಳಿ ಅವರ ಎರಡನೆಯ ಸಂಕಲನವಿದು. ಆದರ್ಶ ಮತ್ತು ಕನಸುಗಳು-ಕೇವಲ ಭ್ರಮನಿರಸನವಾಗುವ ವಾಸ್ತವವನ್ನು ಕವಿ ಇಲ್ಲಿ ಕಂಡುಕೊಂಡಿದ್ದಾರೆ. ಕುರಿಗಳ ಹಾಡು, ಮಾತು, ಮುದುಕಿ ಮಾಗವ್ವ, ಅನಾಥ ಹೂವು, ಎದೆಯ, ವೃಂದಾವನದಲ್ಲಿ ಮುಂತಾದವುಗಳು ಈ ಕವನ ಸಂಕಲನದ ಕವಿತೆಗಳಾಗಿವೆ.
ದಲಿತ-ಬಂಡಾಯದ ಪ್ರತಿಭಟನೆಯ ಸ್ವರೂಪ ಬಸವರಾಜು ಅವರ ಹಲವು ಕವಿತೆಗಳಲ್ಲಿ ಕಾಣಬಹುದು. ಮತ್ತು ಕೆಲ ಕವಿತೆಗಳು ಬೇರೆಯದೇ ಆದ ತಾತ್ವಿಕತೆಯನ್ನು ಕಟ್ಟಿಕೊಡುತ್ತದೆ. ಮತ್ತು ಒಂದಿಷ್ಟು ಕವಿತೆಗಳು ಪ್ರೇಮ ಕವನಗಳಿಂದ ಕೂಡಿದೆ.
ಚೆಲುವನುಸಿರು, ಚೆಲುವಿನ ಹೆಸರೇ , ಜಗದ ಜೀವ ತ್ರಾಣ! ಎನ್ನುವ ದಾರ್ಶನಿಕ ನೋಟವನ್ನು ಕವಿ ಪ್ರಸ್ತುತಪಡಿಸಿದ್ದಾರೆ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಡಿಸೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ...
READ MORE