About the Author

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

1996ರಲ್ಲಿ ಡಿಸೆಂಬರ್‍ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ಪದವೀ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರಿಮೋಡ ಕರಗಿ (1995), ಕೊರಡ ಕೊನರು (2012), ಇವರ ಕವನ ಸಂಕಲನಗಳಾದರೆ, ಕಂಡುಂಡ ಕಥೆಗಳು (2012), ಹೊಡಬಾಳು (2013),  ಇವರ ಕಥಾ ಸಂಕಲನಗಳಾಗಿವೆ. ಆಲದ ಮರ (ಪ್ರಾಚೀನ ಸಂಸ್ಕೃತಿ ಸಂಕಥನ) (2012), ಲೋಕಾಯುತ-ಶಾಕ್ತ-ಶೈವ ಸಂಶೋಧನಾ ಸಮೀಕ್ಷೆ – 1 , ಲೋಕಾಯತ ಮತ್ತು ಶೈವ (ಭಾಗ 1 ಮತ್ತು 2)   ಇವು ಇವರ ಸಂಶೋಧನಾ ಕೃತಿಗಳಾಗಿವೆ.

ಬಸವರಾಜ್ ತೂಲಹಳ್ಳಿ