ಯುವಕವಿ ಅನಂತ ಕುಣಿಗಲ್ ಅವರ 'ಖೈದಿಯ ಗೋಡೆ' 71 ಕವಿತೆಗಳನ್ನು ಒಳಗೊಂಡ ಬೃಹತ್ ಕವನ ಸಂಕಲನವಾಗಿದೆ. ಇತರ ಕವನ ಸಂಕಲನಗಳಿಗೆ ಹೋಲಿಸಿದರೆ 'ಖೈದಿಯ ಗೋಡೆ' ಕವಿತಾ ಸಂಕಲನದಲ್ಲಿ ಯುವಕವಿ ಅನಂತ ಅವರು ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ. ಓದುವ ಅಭಿರುಚಿಯನ್ನೇ ಕಳೆದುಕೊಂಡಿರುವ ಯುವ ಜನತೆಯನ್ನು ಓದಿನೆಡೆಗೆ ಸೆಳೆಯುವಲ್ಲಿ ಇಂತಹ ಪ್ರಯತ್ನಗಳನ್ನು ಕವಿಗಳು ಮಾಡುವುದು ಇಂದಿನ ತುರ್ತು ಕೂಡ ಆಗಿದೆ. ಬಹಳ ಮುಖ್ಯವಾಗಿ ಓದಲು ಆಯಾಸವೆನಿಸಿದಾಗ ಕವಿತೆಯ ಅಡಿಯಲ್ಲಿ ನೀಡಿರುವ ಕ್ಯೂ ಆರ್ ಸ್ಕ್ಯಾನ್ ಮಾಡಿ ಕವಿತೆ ಕೇಳುತ್ತಾ ನೀವು ವಿರಮಿಸಬಹುದು. ಅಥವಾ ಅವರ ಕವಿತೆಗಳನ್ನು ಓದುತ್ತಿದ್ದಾಗ ನಿಮ್ಮೊಳಗೊಂದು ಕವಿತೆ ಹುಟ್ಟಿದರೆ ಖಾಲಿ ಹಾಳೆಯ ಪದ್ಯವಿದೆ. ಅಲ್ಲಿ ನೀವು ನಿಮ್ಮ ರಚನೆಯ ಕವಿತೆ ಬರೆಯಬಹುದು. "ಇದು ನಿಮ್ಮ ಪಾಲು ಏನಾದರೂ ಗೀಚಿಕೊಳ್ಳಿ" ಎಂದು ಕವಿ ಕರೆ ಕೊಡುತ್ತಾರೆ. ಅಲ್ಲಲ್ಲಿ ಅಪೂರ್ಣ ಪದ್ಯಗಳಿವೆ. ಅಲ್ಲಿರುವ ಕವಿ ಭಾವಕ್ಕೆ ನಿಮ್ಮದೇ ಭಾವವನ್ನು ಸೇರಿಸಿ ಕವಿತೆ ಪೂರ್ಣಗೊಳಿಸಬಹುದು ಅಥವಾ ಜುಗಲ್ ಬಂಧಿ ರಚಿಸಬಹುದು. ಕೆಲವು ಕವಿತೆಗಳಿಗೆ ಅಡಿ ಟಿಪ್ಪಣಿ ನೀಡಿದ್ದು ಆ ಕವಿತೆಯ ಒಳನೋಟದ ಒಂದು ವಿಭಿನ್ನ ಪಂಚ್ ಇದಾಗಿರುತ್ತದೆ. ಅನಂತ ಕುಣಿಗಲ್ ಅವರ 'ಮೂರನೆಯವಳು' ಹಾಗೂ 'ಎದೆಯ ದನಿಯ ಕೇಳಿರೋ' ಸಂಕಲನಕ್ಕಿಂತ ಇಲ್ಲಿ ಕವಿ ಹೆಚ್ಚು ಮಾಗಿದ ಕವಿತೆಗಳನ್ನ ನೀಡಿದ್ದಾರೆ.ಅವರು ಸಮಾಜವನ್ನು ನೋಡುವ ಪರಿ ವಿಸ್ತಾರವಾಗಿದೆ.
'ಯಾಶಿ' ಕವಿಯ ಕವಿತೆಗಳಿಗೆ ಸ್ಪೂರ್ತಿಯಾದ ಕಾವ್ಯ ಕನ್ನಿಕೆಯಾಗಿದ್ದಾಳೆ. ಕವಿತೆ ಓದುವಾಗ ಅವಳು ನಿಮ್ಮನ್ನು ಕಾಡುತ್ತಾಳೆ. ಇಲ್ಲಿ ಪ್ರೇಯಸಿಯ ಜನವರಿಕೆ ಇದೆ, ಹುಚ್ಚು ಪೆಚ್ಚು ಕನಸುಗಳಿವೆ, ನೋವು ನಲಿವಿನ ಭಾವಗಳಿವೆ. ಸಾಮಾಜಿಕ ಬದುಕಿನ ಚಿತ್ರಣಗಳು ಹಾಗೂ ರಾಜಕೀಯದ ನೆರಳಿದೆ.
ಈ ಕವಿತೆಗಳು ಖೈದಿಯೊಬ್ಬನ ಮನೋಗತವನ್ನು ಸಾಂದರ್ಭಿಕವಾಗಿ ಬಣ್ಣಿಸುತ್ತವೆ. ಈ ಸಂಕಲನದಲ್ಲಿ ವ್ಯಕ್ತವಾಗುವ ಬದುಕಿನ ಸಂಘರ್ಷ, ಕೌಟುಂಬಿಕ ಸವಾಲುಗಳು ಕೇವಲ ಕವಿಯದಾಗಿ ಉಳಿಯದೆ ಸಾಮಾಜಿಕವಾಗಿ ಪ್ರಕಟಗೊಂಡಿವೆ. ಈ ಸಂಕಲನ ವಿಶಿಷ್ಟ ಪದ ಪುಂಜಗಳ ಗುಚ್ಛವಾಗಿದ್ದು, ಕವಿಯ ಸೂಕ್ಷ್ಮ ಸಂವೇದನೆಗಳ ಭಾವಾಭಿವ್ಯಕ್ತಿಯನ್ನ ಹೊತ್ತು ತಂದಿವೆ. ವೈವಿಧ್ಯಮಯ ದೃಷ್ಟಿಕೋನಗಳಲ್ಲಿ ತೆರೆದುಕೊಳ್ಳುತ್ತಾ ಓದುಗರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತವೆ.ಅನಂತ ಕುಣಿಗಲ್ ಅವರ ಕನ್ನಡ ಸಾಹಿತ್ಯದ ನಿಷ್ಠ ಅಧ್ಯಯನದ ಪ್ರತೀಕವಾಗಿ ಈ ಕೃತಿ ಒಡಮೂಡಿದೆ. ಕಾವ್ಯ ವಸ್ತುವಿನ ಆಯ್ಕೆ, ಅಭಿವ್ಯಕ್ತಿ, ಶೋಧ, ಚಲನಶೀಲತೆ ಈ ಕವಿಯನ್ನ ಕವಿತೆಗಳನ್ನು ವಿಶಿಷ್ಟವಾಗಿ ನೋಡುವಂತೆ ಮಾಡುತ್ತವೆ.
- ಅನಸೂಯ ಯತೀಶ್
ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...
READ MOREhttps://wa.me/c/918548948660