ಕಾವ್ಯ ಕಂಬಳಿ

Author : ವಿಶ್ವನಾಥ ಕಂಬಾಳಿಮಠ, ಮಸ್ಕಿ

Pages 88

₹ 100.00




Year of Publication: 2019
Published by: ಸಿದ್ಧಾರ್ಥ ಪ್ರಕಾಶನ
Address: ಘಾಟಗೆ ಬಡಾವಣೆ, ಕಲಬುರಗಿ-585103

Synopsys

ಕವಿ ವಿಶ್ವನಾಥ ಕಂಬಾಳಿಮಠ ಅವರ ಕವನ ಸಂಕಲನ-ಕಾವ್ಯ ಕಂಬಳಿ. ಒಟ್ಟು 62 ಕವಿತೆಗಳಿದ್ದು, ಬಹುತೇಕ ಕವಿತೆಗಳು ವೈವಿಧ್ಯಪೂರ್ಣವಾಗಿ ಜೀವನಾನುಭವಗಳನ್ನು ತಿಳಿಸುತ್ತವೆ. ಭಾವಾವೇಶದಲ್ಲಿ ಜೀವಂತವಾಗಿರುವ ಪ್ರೀತಿಯ ನೆಲೆಯ ಮೇಲಿನ ಕವಿತೆಗಳು ಇಲ್ಲಿ ಅರಳಿವೆ. ನನ್ನ ಕರೆದೇಯಾ? ಉಪ್ಪಿಲ್ಲದ ಸಾರು, ದೇವರು ಕರೆದಾಗ, ಮೂಗನ ಪ್ರೇಮ, ಪ್ರೇಮ ಪ್ರಚಾರ,ಪರಪಂಚ,ನಂಬಿ ನಡೆಯಬೇಕು,ಉದಯ ದೇವರಾಣೆ, ಜಾನಪದ ಬೆಡಗಿ, ಮರೆತವನು, ಸ್ವರ್ಗವಿದು, ಓಳು ಹುಡುಗಿ,ಚಂದ ವಲ್ಲ,ಮೊದಲಾದ ಕವನಗಳು ಪ್ರೀತಿಯ ಅರ್ಥವ್ಯಾಪ್ತಿಯ ಬೆಳವಣಿಗೆಯನ್ನು ವಿಸ್ತರಿಸುತ್ತಲೇ ಸಾಗಿವೆ.

ಪ್ರೀತಿಯಲ್ಲಿ ಈಜುವವನಿಗೆ, ಆ ಈಜು ಪರಿಣತಿಯನ್ನು ತಂದುಕೊಟ್ಟ ಮೇಲೆ ಆ ಕವಿಗೆ ಆ ಪ್ರೀತಿಯು ಸಂಸಾರದಲ್ಲಿ ನಿಶ್ಚಲತೆಯನ್ನು ಅನುಗೊಳಿಸಿ ಆ ಪ್ರೀತಿಯೇ ತತ್ವಾರ್ಥ ಚಿಂತನೆಯ ಅಭಿವ್ಯಕ್ತಿಯಲ್ಲಿ ಗಾಂಭೀರ್ಯವನ್ನು ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಇಷ್ಟೇ ಸಾಕು ಬದುಕು,ಬೆಪ್ಪಗಿರಬೇಕು,ದೇವರು,ಸತ್ತ ಮೇಲೇನಿಲ್ಲ,ದೇವರ ಚಿತ್ತ, ಉಳಿದವರಿಲ್ಲ,ಆನಂದ ತರುವೆ ನನ್ನ ಮುಕ್ಕಣ್ಣ, ಜೀವನ ಚಿಂತಿಸದಿರಿ, ಮೊದಲಾದ ಕವಿತೆಗಳು ಸಮಾಜಕ್ಕೆ ಏನು ಬೇಕು ಏನು ಬೇಡ ಎನ್ನುವ ವಿವೇಚನೆ ನೀಡುತ್ತವೆ. ನಾನೇ ದೇವರು, ಮಾತಿನ ಮಂಟಪ,ದುಡಿಮೆಯೇ ದೇವರು, ನನ್ನ ಗುಡಿಸಲು, ನಿರಂತರ ಸಾವುಗಳು, ಕಾಮಿಡಿಯಲ್ಲಿ ನಗಬೇಡಿ,ಮೊದಲಾದ ಕವಿತೆಗಳು ಗಮನ ಸೆಳೆಯುತ್ತವೆ.

 

About the Author

ವಿಶ್ವನಾಥ ಕಂಬಾಳಿಮಠ, ಮಸ್ಕಿ
(15 June 1984)

ಲೇಖಕ ವಿಶ್ವನಾಥ ಕಂಬಾಳಿಮಠ, ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ತಂದೆ ವೀರಭದ್ರಯ್ಯ ಸ್ವಾಮಿ, ತಾಯಿ ಪಾರ್ವತಮ್ಮ.ಪಿಯುಸಿವರೆಗೆ ಓದು. ದ್ಯ ಕಲಬುರಗಿಯಲ್ಲಿ ವಾಸ.  ಮನೆಮನೆಗೆ ದಿನಪತ್ರಿಕೆ, ಹಾಲು ಹಂಚುವ ಜೊತೆಗೆ ಪ್ರೊಫೆಷನಲ್ ಕೊರಿಯರ್ ನಲ್ಲಿ ಉದ್ಯೋಗಿ. ಸಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಕೃತಿಗಳು: ಕಾವ್ಯಕಂಬಳಿ (ಕವನ ಸಂಕಲನ), ಬೇವುಬೆಲ್ಲ (ಕವನ ಸಂಕಲನ) ...

READ MORE

Related Books