ಕವಿ, ಲೇಖಕ ಆನಂದ್ ಕುಂಚನೂರು ಅವರ ಮೊದಲ ಕವನ ಸಂಕಲನ ‘ಕರಿನೆಲ’. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾದ ಈ ಕೃತಿಯಲ್ಲಿ ವೈಶಿಷ್ಟ್ಯ ಪೂರ್ಣ ಕವಿತೆಗಳಿವೆ. ಮೊದಲ ಕವನ ಸಂಕಲನದಲ್ಲೇ ಆನಂದ್ ಕುಂಚನೂರು ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ.
ಕವಿ, ಲೇಖಕ ಆನಂದ ಕುಂಚನೂರು ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು. ಇವರು 13-07-1981ರಂದು ಮೂಡಲಗಿಯಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬನಹಟ್ಟಿಯಲ್ಲಿ ಮುಗಿಸಿದ ಆನಂದ ಅವರು ನಂತರ ಧಾರವಾಡದಲ್ಲಿ ಪಿ.ಯು.ಸಿ ಹಾಗೂ ಬೆಳಗಾವಿ ಮತ್ತು ಮೈಸೂರಿನಲ್ಲಿ ಬಿ.ಫಾರ್ಮ್ ಮತ್ತು ಎಂ.ಫಾರ್ಮ್ ಶಿಕ್ಷಣ ಪಡೆದರು. 2007 ರಿಂದ ಖಾಸಗಿ ಔಷದಿ ಕಂಪೆನಿಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು- ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಕರಿನೆಲ’, ‘ವ್ಯೋಮ ತಂಬೂರಿನಾದ’ ಎಂಬ ಕವನ ಸಂಕಲನಗಳು ಮತ್ತು ‘ಪಾದಗಟ್ಟಿ’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳಾದ ಮಯೂರ, ತುಷಾರ, ...
READ MORE