About the Author

ಕವಿ, ಲೇಖಕ ಆನಂದ ಕುಂಚನೂರು ಮೂಲತಃ  ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು. ಇವರು 13-07-1981ರಂದು ಮೂಡಲಗಿಯಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬನಹಟ್ಟಿಯಲ್ಲಿ ಮುಗಿಸಿದ ಆನಂದ ಅವರು ನಂತರ ಧಾರವಾಡದಲ್ಲಿ ಪಿ.ಯು.ಸಿ ಹಾಗೂ ಬೆಳಗಾವಿ ಮತ್ತು ಮೈಸೂರಿನಲ್ಲಿ ಬಿ.ಫಾರ್ಮ್ ಮತ್ತು ಎಂ.ಫಾರ್ಮ್ ಶಿಕ್ಷಣ ಪಡೆದರು. 2007 ರಿಂದ ಖಾಸಗಿ ಔಷದಿ ಕಂಪೆನಿಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು- ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಕರಿನೆಲ’, ‘ವ್ಯೋಮ ತಂಬೂರಿನಾದ’ ಎಂಬ ಕವನ ಸಂಕಲನಗಳು ಮತ್ತು ‘ಪಾದಗಟ್ಟಿ’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. 

ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳಾದ ಮಯೂರ, ತುಷಾರ, ಕನ್ನಡ ಪ್ರಭ, ಪ್ರಜಾವಾಣಿ, ಸುಧಾ, ತರಂಗ, ಕೆಂಪಸಂಪಿಗೆ, ಸಂಕಥನ, ಅವಧಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ಬಾಗಲಕೋಟೆ ಜಿಲ್ಲಾ ಶ್ರೇಷ್ಟ ಕ್ರಿಯಾಶೀಲ ಲೇಖಕ ಪ್ರಶಸ್ತಿ, ಹಾಗೂ ಪಾಂಡಪ್ಪ ಹೂಗಾರ ದತ್ತಿ ಪುಸ್ತಕ ಪ್ರಶಸ್ತಿ, ಕನ್ನಡ ಕ್ರಿಯಾ ಸಮಿತಿ ಹಾನಗಲ್ ನಿಂದ ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಕಥಾ ಪುರಸ್ಕಾರ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

ಆನಂದ್ ಕುಂಚನೂರ

(13 Jul 1981)

BY THE AUTHOR