ಕಳ್ಳುಬಳ್ಳಿ

Author : ಮಾಲತಿ ಪಟ್ಟಣಶೆಟ್ಟಿ



Year of Publication: 2022
Published by: ಕಲ್ಲಚ್ಚು ಪ್ರಕಾಶನ

Synopsys

ಲೇಖಕಿ ಮಾಲತಿ ಪಟ್ಟಣಶೆಟ್ಟಿ ಹಾಗೂ ಪುತ್ರಿ ಸೀಮಾ ಕುಲಕರ್ಣಿ ಅವರ ಕವನಗಳ ಸಂಕಲನ ಕಳ್ಳುಬಳ್ಳಿ. ಕೃತಿಯಲ್ಲಿ ಲೇಖಕಿ ಮಾಲತಿ ಪಟ್ಟಣಶೆಟ್ಟಿಯವರೇ ಹೇಳಿರುವಂತೆ, “ಕಳ್ಳು ಬಳ್ಳಿ” ಕವನ ಸಂಕಲನದಲ್ಲಿ ತಾಯಿ ಮತ್ತು ಮಗಳಿಬ್ಬರ ಕವಿತೆಗಳಲ್ಲಿ ಕರುಳ ಮಿಡಿತಗಳ ಬಳ್ಳಿಯು ಚೆಲ್ಲುವರಿದಿದೆ. ಹಾಗೆ ಇಬ್ಬರ ಕಥೆಗಳ, ಕವಿತೆಗಳ ಪ್ರಬಂಧಗಳ ಮತ್ತು ನಾಟಕದಂಥ ಸಾಹಿತ್ಯ ಪ್ರಕಾರಗಳಲ್ಲಿ ತಾಯಿ ಮಕ್ಕಳು ಸಂಯುಕ್ತ ರೂಪದಲ್ಲಿ ಪುಸ್ತಕ ಪ್ರಕಟಿಸಿದ್ದು ವಿರಳವೆಂದು ನಮ್ಮ ತಿಳುವಳಿಕೆ. ಜಗತ್ತಿನಲ್ಲಿ ಹಾಗೆ ನೋಡಿದರೆ ಬಹಳಷ್ಟು ಜೋಡಿಗಳಿವೆ. ಆದರೆ ತಾಯಿ ಮಗಳ ಜೋಡಿಯಲ್ಲಿರುವ ತಿಳುವಳಿಕೆ, ಅನನ್ಯತೆ ಮತ್ತು ಅರ್ಪಣಾಭಾವಗಳು ಬೇರೆ ಜೋಡಿಗಳಲ್ಲಿ ಕಾಣಿಸುವುದಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ. ಈ ಪುಸ್ತಕದ ಪ್ರಕಣೆಯು ಸಾಧ್ಯವಾದದ್ದು ನನ್ನ ಮಗಳು ಸೀಮಾಳ ಪ್ರೇರಣೆಯಿಂದ ಮತ್ತು ಧೃಡ ನಿರ್ಧಾರಗಳಿಂದಾಗಿ. ಕಾವ್ಯವನ್ನು ಓದದ ಜಗತ್ತಿನಲ್ಲಿ ಕೆಲವರಾದರೂ ಅದನ್ನು ಪ್ರೀತಿಸುವವರು ಇದ್ದಾರು ಎಂಬ ಆಶವಾದ ನಮ್ಮಿಬ್ಬರಲ್ಲಿದೆ. ಕವಿತೆಯನ್ನು ರಚಿಸುವ ಕವಿಗಂತೂ ಸಿಗುವ ಆನಂದವು ಶಬ್ದಗಳಲ್ಲಿ ವರ್ಣಿಸಲಾಗದು. ಅದನ್ನು ನಮ್ಮ ಸೆರಗಿನಲ್ಲಿ ಗಂಟು ಕಟ್ಟಿಕೊಂಡು ಸುಖಿಸುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ.

About the Author

ಮಾಲತಿ ಪಟ್ಟಣಶೆಟ್ಟಿ
(26 December 1940)

ಕೊಲ್ಲಾಪುರದಲ್ಲಿ ಜನಿಸಿದ ಮಾಲತಿ ಪಟ್ಟಣಶೆಟ್ಟಿ ಅವರ ತಾಯಿ ಶಿವಗಂಗೆ. ಮೂರೇ ವರ್ಷದಲ್ಲಿ ತಾಯಿಲ್ಲದ ತಬ್ಬಲಿಯಾದರು. ತಂದೆ ಶಾಂತೇಶ ಕೋಟೂರ. ಧಾರವಾಡದ ಹೆಣ್ಣುಮಕ್ಕಳ ತರಬೇತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಬೆಳಗಾವಿಯ ರಾಣಿ ಪಾರ್ವತಿದೇವಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಧಾರವಾಡದ ಜೆ.ಎಸ್.ಎಸ್. ಕಾಲೇಜು ಸೇರಿದರು. ಅಲ್ಲಿಯೇ ವಿಭಾಗದ ಮುಖ್ಯಸ್ಥರಾಗಿ 1998ರಲ್ಲಿ ನಿವೃತ್ತರಾದರು. ಅಂತರಂಗ ನಾಟಕ ತಂಡದ ಜೊತೆಗೆ ಗುರುತಿಸಿಕೊಂಡಿದ್ದ ಅವರು ನಾಟಕಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ನಟಿಸುತ್ತಿದ್ದರು. ಬಾ ...

READ MORE

Related Books