‘ಕಲರವ’ ಕೃತಿಯು ರಮೇಶ ಹೆಗಡೆ ಅವರ ಮಕ್ಕಳ ಕವನಸಂಕಲನವಾಗಿದೆ. ನೀತಿಪಾಠಗಳನ್ನು ಹೇಳುವುದೇ ಇಲ್ಲಿಯ ಕವಿತೆಗಳ ಜೀವಾಳ. ದಿನಂಪ್ರತಿಯ ವಿದ್ಯಮಾನಗಳನ್ನು ವಸ್ತುವಾಗಿಸಿಕೊಂಡು ಮಕ್ಕಳೀಗೆ ತಿಳಿಯುವ ಹಾಗೆ ಸರಳವಾಗಿ ರಚಿಸಲಾಗಿದೆ. ನಿಸರ್ಗ ಕೇಂದ್ರಿತ ಕವಿತೆಗಳೂ ಇದ್ದು, ಮಕ್ಕಳಿಗೆ ಮುದ ನೀಡುತ್ತವೆ.
ರಮೇಶ ಹೆಗಡೆ ಮೂಲತಃ ಶಿರಸಿಯವರು. ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಹಲವು ಸಮಸ್ಯೆಗಳಿಂದ ಶಿಕ್ಷಣ ಮುಂದುವರಿಸಲಾಗಲಿಲ್ಲ. ನಂತರ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಕತೆ-ಕವನ ರಚಿಸುವುದು ಇವರ ಹವ್ಯಾಸ. ಕೃತಿಗಳು: ಕಾವ್ಯ ಚಿಗುರು (ಕವನ ಸಂಕಲನ), ಮನದಲ್ಲಿ ಮನೆಯ ಮಾಡಿ (ಕನವ ಸಂಕಲನ), ಚಿಣ್ಣ-ಚಿನ್ನಾಟ (ಮಕ್ಕಳ ಕವಿತೆಗಳು), ಖರ್ಚಾಗದ ಪದ್ಯಗಳು (ಕವನ ಸಂಕಲನ), ನೋವಿನಲಿ ನವಿಲುಗರಿ (ಗಜಲ್), ಕಿಟಕಿಯೊಳಗಿನ ಕಣ್ಣು (ಸಾಲ್ಮಿಂಚುಗಳು). ಪ್ರಶಸ್ತಿ-ಪುರಸ್ಕಾರಗಳು: ಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳಿಂದ ರಮೇಶ್ ಅವರಿಗೆ ಸನ್ಮಾನಗಳು ಸಂದಿವೆ. ...
READ MORE