ರಮೇಶ ಹೆಗಡೆ ಮೂಲತಃ ಶಿರಸಿಯವರು. ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಹಲವು ಸಮಸ್ಯೆಗಳಿಂದ ಶಿಕ್ಷಣ ಮುಂದುವರಿಸಲಾಗಲಿಲ್ಲ. ನಂತರ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಕತೆ-ಕವನ ರಚಿಸುವುದು ಇವರ ಹವ್ಯಾಸ.
ಕೃತಿಗಳು: ಕಾವ್ಯ ಚಿಗುರು (ಕವನ ಸಂಕಲನ), ಮನದಲ್ಲಿ ಮನೆಯ ಮಾಡಿ (ಕನವ ಸಂಕಲನ), ಚಿಣ್ಣ-ಚಿನ್ನಾಟ (ಮಕ್ಕಳ ಕವಿತೆಗಳು), ಖರ್ಚಾಗದ ಪದ್ಯಗಳು (ಕವನ ಸಂಕಲನ), ನೋವಿನಲಿ ನವಿಲುಗರಿ (ಗಜಲ್), ಕಿಟಕಿಯೊಳಗಿನ ಕಣ್ಣು (ಸಾಲ್ಮಿಂಚುಗಳು).
ಪ್ರಶಸ್ತಿ-ಪುರಸ್ಕಾರಗಳು: ಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳಿಂದ ರಮೇಶ್ ಅವರಿಗೆ ಸನ್ಮಾನಗಳು ಸಂದಿವೆ.