ಕಾಲನ ಸುಳಿಗೆ ಸಿಲುಕಿದ ಕಾಲ

Author : ಸಂತೆಕಸಲಗೆರೆ ಪ್ರಕಾಶ್‌

Pages 118

₹ 120.00




Year of Publication: 2020
Published by: ನುಡಿ ಪ್ರಕಾಶನ
Address: ವಿಜಯನಗರ ಬೆಂಗಳೂರು 560040
Phone: 9986167684

Synopsys

ಕಾಲನ ಸುಳಿಗೆ ಸಿಲುಕಿದ ಕಾಲ ಸಂತೆಕಸಲಗೆರೆ ಪ್ರಕಾಶ್‌ ಅವರ ಕವನ ಸಂಕಲವಾಗಿದೆ. ಇಲ್ಲಿ ಕಾಲದ ವಿಪರೀತವನ್ನು ಬಹು ಬಗೆಯಲ್ಲಿ ಚಿಸಲಾಗಿದೆ. ಅಡಿಗರ ನಡೆಯ ಹಾಯಿ ದೋಣಿ ಇಲ್ಲಿ ಕಣ್ಣೀರ ಕಡಲಿನಲ್ಲಿದೆ. ಆ ನಗು ಇಲ್ಲಿ ಕಣ್ಣೀರಾಗಿದೆ. ಕಾಲವನ್ನು ಕೇಂದ್ರವನ್ನಾಗಿಟ್ಟುಕೊಂಡು ಅದರ ಸುತ್ತ ಕಾವ್ಯ ಶಿಲ್ಪವನ್ನು ಸೂಚಿಸುವ ಪ್ರಯತ್ನ ಮೆಚ್ಚುವಂತಹದ್ದು, ದೇವರು, ಸಾವು, ದುಃಖ, ಬದುಕಿನ ತೀವ್ರತೆಗಳು ಇಲ್ಲಿ ಭಿನ್ನವಾಗಿ ಕಾಡುತ್ತಿವೆ. ಕವಿತೆಯ ಹಾಸು ವೇದನೆಯ ಹೊಕ್ಕಿದೆ. ಸಂವೇದನೆಯ ಮೂಲವಾದ ಮರುಳ ಇಲ್ಲಿನ ಕಾವ್ಯದಲ್ಲಿನ ಅಂತ:ಕರಣವ ಆಗಿದೆ. ಕಾಲನ ಜತೆ ಇಲ್ಲಿನ ಕಾವ್ಯಯಾನ ಕಡಲನ್ನೂ ಮೀರಿದ ಕಣ್ಣೀರಿನ ದರ್ಶನ ಮಾಡಿಸುತ್ತದೆ. ಮರುತಕ್ಕೆ ಮನವೇ ಇಲ್ಲವೆಂಬ ಬಡುಕಾಟ ಈ ಸಂಕಲನದುದ್ದಕ್ಕೂ ಹಾಸುಹೊಕ್ಕಾಗಿದೆ.ಎಂದು ಡಾ.ಆರ್‌.ರಾಜಪ್ಪ ದಳವಾಯಿ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books